ಬೆಂಗಳೂರು:
ಕಾವೇರಿ ನೀರಿಗಾಗಿ ಬೆಂಗಳೂರು ಬಂದ್ಗೆ ಕಂಪ್ಲೀಟ್ ಸಕ್ಸಸ್ ಆಗಿದೆ ,ರೈತ ಮುಖಂಡರಿಂದ ಬೆಂಗಳೂರು ಬಂದ್ಗೆ ಕರೆ ನೀಡಲಾಗಿತ್ತು. ನಗರದ ಫ್ರೀಡಂ ಪಾರ್ಕ್ನಲ್ಲಿ ಕಾವೇರಿಗಾಗಿ ಅನ್ನದಾತರ ಆಕ್ರೋಶ ಭುಗಿಲೆದ್ದಿತ್ತು. ರಸ್ತೆ ರಸ್ತೆಯಲ್ಲಿ ಮಲಗಿ ಉರುಳು ಸೇವೆ ಮಾಡಿದ್ದಾರೆ. ಅಲ್ದೇ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಕೂಡಲೇ ನಿಲ್ಲಿಸಬೇಕೆಂದು ರಾಜ್ಯ ಸರ್ಕಾರದ ವಿರುದ್ಧ ರೈತ ಮುಖಂಡರು ಕಿಡಿಕಾರಿದ್ರು.
ಬೆಂಗಳೂರು ಬಂದ್ ಕಂಪ್ಲೀಟ್ ಸಕ್ಸಸ್ ಆಗಿದೆ. ಸ್ವಯಂಪ್ರೇರಿತವಾಗಿ ಬೆಂಗಳೂರಿನಲ್ಲಿ ಎಲ್ಲಾ ಬಂದ್ ಮಾಡಲಾಗಿದೆ. ಜನರಿಲ್ಲದೇ ರೋಡ್ ಫುಲ್ ಬಿಕೋ ಎನ್ನುತ್ತಿದ್ದು. ಕೆ.ಆರ್ ಮಾರ್ಕೆಟ್, ಕೆ.ಆರ್ ಸರ್ಕಲ್ ಖಾಲಿ ಖಾಲಿ ಹೊಡೆಯುತ್ತಿತ್ತು. ಪ್ರಯಾಣಿಕರಿಲ್ಲದೇ BMTC, KSRTC ಬಸ್ಗಳು ಓಡಾಡುತ್ತಿದ್ವು.ಭುಗಿಲೆದ್ದ ಅನ್ನದಾತರ ಕಿಚ್ಚಿನಿಂದ ಕಾವೇರಿ ಹೋರಾಟ ಕೊನೆಗೂ ಸಕ್ಸಸ್ ಆಗಿದೆ. ಆದ್ರೆ, ರಾಜ್ಯ ಸರ್ಕಾರ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದನ್ನಾ ಕಾದುನೋಡ್ಬೇಕಿದೆ….