ಸ್ಯಾಂಡಲ್ವುಡ್:
100 ಕೋಟಿ ದಾಟುತ್ತಾ.ಕಾಂತಾರ ಪ್ರೀಕ್ವೆಲ್..! ‘ಕಾಂತಾರ’ ಪಾರ್ಟ್ 2 ಶೂಟಿಂಗ್ ಕ್ಷಣಗಣನೆ…. ಸ್ಯಾಂಡಲ್ವುಡ್: ‘ಕಾಂತಾರ’. ಅದೊಂದು ದಂತಕಥೆ, ಹಿಸ್ಟರಿ ಕ್ರಿಯೇಟ್ ಮಾಡಬೇಕು ಅಂತ ತೆರೆಗೆ ಅಪ್ಪಳಿಸಿ, ರೆಕಾರ್ಡ್ ಮೇಲೆ ರೆಕಾರ್ಡ್ ಮಾಡಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿ ಮಾಡಿದೆ.. ಕಾಂತಾರ ಅನ್ನೋ ಒಂದು ಸಿನಿಮಾ, ಬಜೆಟ್ಗಿಂತಲೂ ಕಂಟೆಂಟ್ ಇಂಪೊರ್ಟೆಂಟ್ ಅಂತ ಪ್ರಪಂಚಕ್ಕೆ ಸಾರಿ ಸಾರಿ ಹೇಳಿದ ಸಿನಿಮಾ. ಮೌತ್ ಪಬ್ಲಿಸಿಟಿ ಮೂಲಕ ಕರಾವಳಿ ಸೊಗಡಿನ ಕಾಂತಾರ ಸಿನಿಮಾ ಇಡೀ ವರ್ಲ್ಡ್ ವೈಡ್ ಸೌಂಡ್ ಮಾಡಿದೆ..ಈ ಸಿನಿಮಾ ನೋಡಿದವರೆಲ್ಲಾ ವಾರೇ ವ್ಹಾ ಕಾಂತಾರ ಅಂತ ಮುಂದಿನ ವರ್ಷನ್ಗಾಗಿ ವೇಟ್ ಮಾಡ್ತಿದ್ದಾರೆ.. ರಿಷಬ್ ಶೆಟ್ಟಿ ಹೇಳುವ ಪ್ರಕಾರ ಕಾಂತಾರ ಸೀಕ್ವೆಲ್ ಬರಲ್ಲ.. ಪ್ರೀಕ್ವೆಲ್ ಬರುತ್ತೆ ಅಂತ.. ಈಗ ಅದೇ ಪ್ರೀಕ್ವೆಲ್ಗಾಗಿ ಸಕಲ ಸಿದ್ಧತೆ ನಡೆಯುತ್ತಿದೆ…
ಕಾಂತಾರ ಸಿನಿಮಾಕ್ಕಿಂತ ಕಾಂತಾರ ಪ್ರೀಕ್ವೆಲ್ ಹೈ ಬಜೆಟ್ನಲ್ಲಿ ಮೂಡಿಬರಲಿದೆಯಂತೆ. ಕೆಲ ಮೂಲಗಳ ಪ್ರಕಾರ ಬರೋಬರಿ 100 ಕೋಟಿಗೂ ಅಧಿಕ ಬಜೆಟ್ ಮೂಡಿಬರಲಿದೆಯಂತೆ ಕಾಂತಾರ ನೆಕ್ಸ್ಟ್ ವರ್ಷನ್.. ಇನ್ನು ಕಾಂತಾರ ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರಗಳಿಂದ ಹಿಡಿದು ಎಲ್ಲಾ ಪಾತ್ರಗಳು ನೋಡುಗರ ಗಮನ ಸೆಳೆದಿತ್ತು.. ಆದ್ರೆ ಪ್ರೀಕ್ವೆಲ್ನಲ್ಲಿ ಕೆಲ ಕಲಾವಿದರು ಇರುವುದಿಲ್ವಂತೆ.. 50ರಷ್ಟು ಹಳೆ ಕಲಾವಿದರ ಜೊತೆ 50ರಷ್ಟು ಹೊಸ ಕಲಾವಿದರು ಇರ್ತಾರಂತೆ.. ಕಥೆಗೆ ತಕ್ಕಂತೆ ಪಾತ್ರಗಳು ಸಾಗುತ್ತಂತೆ.. ಇದೀಗ ಕಾಂತಾರ ಪ್ರಿಕ್ವೆಲ್ನಲ್ಲಿ ತಲೈವಾ ರಜನಿಕಾಂತ್ ಆ್ಯಕ್ಟ್ ಮಾಡ್ತಾರಂತೆ. ಇನ್ನು ಕಾಂತಾರ ಪ್ರೀಕ್ವೆಲ್ನಲ್ಲಿ ಬ್ಯುಸಿಯಾಗಿರೋ ರಿಷಬ್ ಶೆಟ್ಟಿ, ಇನ್ ಮೂರು ತಿಂಗಳುಗಳ ಕಾಲ ಮೊಬೈಲ್ ಸ್ವೀಚ್ ಆಫ್ ಮಾಡಲಿದ್ದಾರಂತೆ..