Breaking News

ಅಪಾರ್ಟ್ಮೆಂಟ್​ಗಳಿಗೂ ನೋ ನ್ಯೂ ಇಯರ್ ಸೆಲೆಬ್ರೇಷನ್..!

ಹೊಸ ವರ್ಷದ ಅಮಲಿನ ಪಾರ್ಟಿಗಳ ಮೇಲೆ ಸಿಸಿಬಿ ಹದ್ದಿನ ಕಣ್ಣು....

SHARE......LIKE......COMMENT......

ಬೆಂಗಳೂರು:

ಪ್ರತಿವರ್ಷ ನ್ಯೂ ಇಯರ್ ಹತ್ತಿರವಾಗ್ತ ಇದ್ದಂತೆ ಜನರು ಫುಲ್ ಪ್ರೀಪೇರ್ ಆಗ್ತಾಯಿದ್ರು.‌ ಡಿಸೆಂಬರ್ ತಿಂಗಳು ಪೂರ್ತಿ ಪಾರ್ಟಿ, ಸೆಲಬ್ರೇಷನ್ ಮೂಡ್​ನಲ್ಲೆ ಇರ್ತಾಯಿದ್ರು. ಆದ್ರೆ ಈ ಬಾರಿ ಕೊರೊನಾದಿಂದಾಗಿ ಮೋಜು ಮಸ್ತಿ ಜೊತೆಗೆ ಅಪಾರ್ಟ್ಮೆಂಟ್​ಗಳಲ್ಲಿ ಸೆಲಬ್ರೇಷನ್ ಗೂ ಬ್ರೇಕ್ ಬಿದ್ದಿದೆ. ಹೊಸ ವರ್ಷ ಆಚರಣೆಗೆ ಬಿಬಿಎಂಪಿ ಈಗಾಗಲೇ ಬ್ರೇಕ್ ಹಾಕಿದ್ದು ಅಪಾರ್ಟ್ಮೆಂಟ್ ಲಾಬಿ ಔಟ್ ಸೈಡ್ ಜಾಗಗಳಲ್ಲಿ ಜನ ಸೇರಿ ಆಚರಣೆ ಮಾಡಲು ಬ್ರೇಕ್ ಬಿದ್ದಿದೆ.‌ ರಾಜ್ಯ ಸರ್ಕಾರದ ಆದೇಶದಂತೆ ಕೊರೊನಾ ರೂಲ್ಸ್ ಎಲ್ಲಾ ಕಡೆ ಅನ್ವಯವಾಗಲಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆಯನ್ನ ನಿಷೇಧಿಸಲಾಗಿದೆ.‌ ಅಪಾರ್ಟ್ಮೆಂಟ್​ಗಳಿಗೂ ಇದು ಅನ್ವಯವಾಗಲಿದ್ದು ಅಪಾರ್ಟ್ಮೆಂಟ್​ನಲ್ಲಿ ವಾಸವಿರುವ ಜನರು ಒಂದೆಡೆ ಸೇರಿ ಆಚರಣೆ ಮಾಡುವ ಹಾಗಿಲ್ಲ. ಒಂದು ವೇಳೆ ಗುಂಪು ಗುಂಪಾಗಿ ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ಮಾಡಿದ್ದು ಕಂಡು ಬಂದಲ್ಲಿ ಕ್ರಮ‌ ಜರುಗಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ಕೇವಲ ಇಷ್ಟೆ ಅಲ್ಲಾ ಈ ಬಾರಿ ಪಬ್ ರೆಸ್ಟೊರೆಂಟ್​ಗಳಲ್ಲಿ ಡಿಜೆ, ಡಾನ್ಸ್ ಫ್ಲೋರ್​ಗೂ ಕೂಡ ನಿಷೇದ ಇದೆ.‌ ನ್ಯೂ ಇಯರ್​ನಲ್ಲಿ ಮ್ಯೂಸಿಕ್​​ಗೆ ಗುಂಪು ಗುಂಪಾಗಿ ಕುಣಿದು ಕುಪ್ಪಳಿಸುತ್ತಿದ್ದ ಜನರು ಈ ಬಾರಿ ಡಿಜೆ ಇಲ್ಲದೆ ಕೊರೊನಾ ನಿಯಮದ ಪ್ರಕಾರವೇ ಆಚರಣೆ ಮಾಡಬೇಕಿದೆ.‌ ಒಟ್ನಲ್ಲಿ ಕೊರೊನಾ ದಿಂದಾಗಿ ಈ ಬಾರಿ ನ್ಯೂ ಇಯರ್ ಸೆಲಬ್ರೇಷನ್​ಗೆ ಬ್ರೇಕ್ ಬಿದ್ದಿದ್ದು ಹೊಸ ವರ್ಷ ಆಚರಣೆಗೆ ಟೈಟ್ ರೂಲ್ಸ್ ಅಪ್ಲೈ ಆಗಲಿದೆ.‌…..