ಬೆಂಗಳೂರು:
ದೊಡ್ಡವರೆಲ್ಲಾ ಜಾಣರಲ್ಲ, ಚಿಕ್ಕವರೆಲ್ಲಾ ಕೋಣರಲ್ಲ. ಈ ಹಾಡು ಕಿವಿ ಮೇಲೆ ಬಿದ್ರೆ, 80ರ ದಶಕದ ಗುರು ಶಿಷ್ಯರು ಸಿನಿಮಾ ನೆನಪಾಗುತ್ತೆ. ಇದೀಗ ಕನ್ನಡದಲ್ಲಿ ಮತ್ತೆ ಗುರು ಶಿಷ್ಯರು ಅನ್ನೋ ಸಿನಿಮಾ ಬರ್ತಿದ್ದು, ಹಳೇ ಸಿನಿಮಾವನ್ನ ದ್ವಾರಕೀಶ್ ನಿರ್ಮಿಸಿ, ನಟಿಸಿದ್ದ ದ್ವಾರಕೀಶ್ ಅವ್ರೇ ಹೊಸ ಸಿನಿಮಾ ಪೋಸ್ಟರ್ ರಿವೀಲ್ ಮಾಡಿದ್ದಾರೆ. ಮೂವತ್ತೊಂಬತ್ತು ವರ್ಷಗಳ ಹಿಂದೆ ಕನ್ನಡದಲ್ಲಿ ಬಂದಿದ್ದ ಗುರುಶಿಷ್ಯರು ಸಿನಿಮಾವನ್ನ ಪ್ರೇಕ್ಷಕರು ಇನ್ನು ಮರೆತ್ತಿಲ್ಲ. ವಿಷ್ಣುವರ್ಧನ್, ಮಂಜುಳ ಜೊತೆಗೆ ಅವತ್ತಿನ ಕಾಲದ ಕನ್ನಡದ ಎಲ್ಲಾ ಹಾಸ್ಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ರು. ಭಾರ್ಗವ ನಿರ್ದೇಶಿಸಿದ್ದ ಸಿನಿಮಾ ಭರ್ಜರಿ ಸಕ್ಸಸ್ ಕಂಡಿತ್ತು.
ಸೂಪರ್ ಹಿಟ್ ಗುರು ಶಿಷ್ಯರು ಸಿನಿಮಾ ಟೈಟಲ್ನಲ್ಲೇ ಈಗ ಹೊಸ ಸಿನಿಮಾ ಬರ್ತಿದೆ. ಈ ಬಾರಿ ಶರಣ್ ಹೈಸ್ಕೂಲ್ ಪಿಟಿ ಮಾಸ್ಟರ್ ಆಗಿ ಗುರುವಿನ ಜಾಗ ಅಲಂಕರಿಸಿದ್ದಾರೆ. ಅವರ ಬಳಿ ಆಟಗಳನ್ನ ಕಲಿಯುವ ಮಕ್ಕಳೇ ಶಿಷ್ಯರು. ಸ್ಪೆಷಲ್ ವೀಡಿಯೋ ಮಾಡಿ ಗುರು ಶಿಷ್ಯರು ಸಿನಿಮಾ ಪೋಸ್ಟರ್ ರಿವೀಲ್ ಮಾಡಿದೆ ಚಿತ್ರತಂಡ. ತರುಣ್ ಸುಧೀರ್ ಮತ್ತು ಹೀರೋ ಶರಣ್ ಜಂಟಿಯಾಗಿ ಗುರು ಶಿಷ್ಯರು ಸಿನಿಮಾ ನಿರ್ಮಾಣ ಮಾಡ್ತಿದ್ದು, ಟೈಟಲ್ ಮೋಷನ್ ಪೋಸ್ಟರ್ನ ನಟ, ನಿರ್ಮಾಪಕ ದ್ವಾರಕೀಶ್ ಅವರಿಂದ ರಿವೀಲ್ ಮಾಡಿಸಿದ್ದಾರೆ……