ಲಂಡನ್ :
ದಿನದಿಂದ ದಿನಕ್ಕೆ ತೀವ್ರತರನಾಗಿ ಹರಡುತ್ತಿರುವ ಕೊರೋನಾ ಸೋಂಕಿಗೆ ಇಂಗ್ಲೆಂಡ್ ಅಕ್ಷರಷಃ ತತ್ತರಿಸಿ ಹೋಗಿದೆ. ಇದೀಗ ಹೊಸ ರೂಪ ತಿರುಗಿರುವ ಕೋವಿಡ್ನಿಂದಾಗಿ ಇಂಗ್ಲೆಂಡ್ನಲ್ಲಿ ಮತ್ತೆ ಸಮಸ್ಯೆ ಉಲ್ಭಣಗೊಂಡಿದೆ. ಈ ಕಾರಣದಿಂದಾಗಿ ಟಯರ್ 4 ಲಾಕ್ಡೌನ್ ವಿಧಿಸಿ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಆದೇಶ ಹೊರಡಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಹೇಳಿರುವ ಇಂಗ್ಲೆಂಡ್ ಪ್ರಧಾನಿ ಕಠಿಣವಾದ ಟಯರ್ 4 ಲಾಕ್ಡೌನ್ ಬಗ್ಗೆ ಮಾಹಿತಿ ನೀಡಿದ್ದಾರೆ. ರೂಪಾಂತರಗೊಂಡಿರುವ ಕೊರೋನಾ ವೈರಸ್ ಬಗ್ಗೆ ಮಾಹಿತಿ ನೀಡಿದ ಪ್ರೊ.ಕ್ರಿಸ್ ವಿಟ್ಟಿ, ರೂಪಾಂತರಗೊಂಡಿರುವ ಕೊರೋನಾ ಬಹು ಬೇಗನೆ ಹರಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಲಂಡನ್ ಹಾಗೂ ಆಗ್ನೇಯ ಇಂಗ್ಲೆಂಡ್ ಪ್ರದೇಶದಲ್ಲಿ ಕಠಿಣ ಲಾಕ್ಡೌನ್ ಹೇರಲಾಗಿದೆ. ಈ ನಿಯಮದ ಪ್ರಕಾರ ರೆಡ್ಝೋನ್ ಪ್ರದೇಶದಲ್ಲಿರುವವರು ಕ್ರಿಸ್ಮಸ್ಗಾಗಿ ಮನೆಮನೆಗೆ ತೆರಳುವಂತಿಲ್ಲ. ಕೆಲಸ, ಶಿಕ್ಷಣ, ಆರೋಗ್ಯ, ವ್ಯಾಯಾಮ ಮತ್ತು ರಕ್ಷಣೆ ಇವನ್ನು ಹೊರತುಪಡಿಸಿ ಬೇರೆಲ್ಲೂ ತೆರಳುವ ಹಾಗಿಲ್ಲ. ಮನೆಯಲ್ಲಿಯೇ ಇರಬೇಕೆಂದು ಆದೇಶ ಹೊರಡಿಸಲಾಗಿದೆ. ರಾತ್ರಿ ಸಮಯದಲ್ಲಿ ಹೊರಗಡೆ ಇರಬಾರದು ಎಂದು ಆದೇಶದಲ್ಲಿ ಹೇಳಲಾಗಿದೆ. ಜಿಮ್, ಸಿನಿಮಾ ಥೀಯೇಟರ್, ಕ್ಯಾಸಿನೋ ಸೇರಿದಂತೆ ಅನಗತ್ಯ ವ್ಯವಹಾರಗಳಿಗೆ ಬ್ರೇಕ್ ಹಾಕಲಾಗಿದೆ ಮತ್ತು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಆದೇಶ ಹೊರಡಿಸಲಾಗಿದೆ……