ಬೆಂಗಳೂರು:
ಸ್ಯಾಂಡಲ್ವುಡ್ನ ಆಪ್ತ ಗೆಳೆಯರಾದ ಶರಣ್ ಮತ್ತು ತರುಣ್ ಸುಧೀರ್ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ವಿಷ್ಹಲ್ ಪೋಸ್ಟರ್ ಮೂಲಕ, ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದ್ದ ಶರಣ್, ಸದ್ಯದಲ್ಲೇ ಟೈಟಲ್ ರಿವೀಲ್ ಮಾಡಲಿದ್ದಾರೆ. ರ್ಯಾಂಬೋ ಸಿನಿಮಾ ಮೂಲಕ ನಾಯಕನಟನಾಗಿ ಶರಣ್ ಎಂಟ್ರಿ ಕೊಟ್ಟಾಗಿದಿನಿಂದ, ಸಿನಿಮಾ ವಿಚಾರವಾಗಿ ಸಾಥ್ ಕೊಡ್ತಾ ಬರ್ತಿದ್ದಾರೆ ತರುಣ್ ಸುಧೀರ್. ಸಿನಿಮಾ ಹೊರತು ಪಡಿಸಿಯೂ, ಇವರಿಬ್ಬರೂ ಆತ್ಮೀಯ ಗೆಳೆಯರು. ಇದೀಗ ಒಟ್ಟಾಗಿ ಸಿನಿಮಾ ಮಾಡೋಕ್ಕೆ ರೆಡಿಯಾಗಿದ್ದಾರೆ.
ಪೋಸ್ಟರ್ ನೋಡಿದವರೆಲ್ಲಾ ವಿಷ್ಹಲ್ ಅನ್ನೊದೇ ಚಿತ್ರದ ಟೈಟಲ್ ಅಂತ ಊಹೆ ಮಾಡಿದರು. ಆದರೆ, ಇದೀಗ ಇದೇ ಡಿಸೆಂಬರ್ 21ಕ್ಕೆ ಟೈಟಲ್ ರಿವೀಲ್ ಮಾಡೋದಾಗಿ ಹೇಳಿದ್ದಾರೆ ಶರಣ್. ”ಲಡ್ಡು ಸಿನಿಮಾ ಹೌಸ್ ಹಾಗೂ ತರುಣ್ ಸುಧೀರ್ ಕ್ರಿಯೇಟಿವ್ಸ್ ಸೇರಿ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರದ ಟೈಟಲ್ನ್ನ ಡಿಸೆಂಬರ್ 21ರಂದು ಅನಾವರಣಗೊಳಿಸಲಾಗುವುದು” ಎಂದು ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಅಂದ್ಹಾಗೇ ಮೊದಲ ಬಾರಿಗೆ ಶರಣ್ ಮತ್ತು ತರುಣ್ ಒಟ್ಟಾಗಿ ಸಿನಿಮಾ ನಿರ್ಮಾಣ ಮಾಡುತ್ತಿರೋದೇ ಆದ್ರೂ, ಈ ಹಿಂದೆ ಶರಣ್ ಅಭೀನಯದ ರ್ಯಾಂಬೋ ಚಿತ್ರಕ್ಕೆ ರೈಟರ್ ಆಗಿ, ವಿಕ್ಟರಿ 2 ಚಿತ್ರಕ್ಕೆ ಸ್ಟೋರಿ ಮತ್ತು ಸ್ಕ್ರೀನ್ ಪ್ಲೇ ಮಾಡಿದ್ದಾರೆ ತರುಣ್……