Breaking News

ಮೋಸದ ಜಾಲಕ್ಕೆ ಈಗ ಹೊಸ ಸೇರ್ಪಡೆ ಸ್ನಾಪ್ ಇಟ್..!

ಇದೊಂದು ವಂಚನೆಯ ಬೃಹತ್ ಜಾಲ....

SHARE......LIKE......COMMENT......

ಬೆಂಗಳೂರು:

ಆನ್ಲೈನ್, ಡಿಜಿಟಲ್ ಮಾರ್ಕೆಟಿಂಗ್ ಎಲ್ಲಾ ಬಂದ ಮೇಲೆ ಜನರನ್ನ ಮೋಸ ಮಾಡುವ ವಿಧವೂ ಬದಲಾಗಿದೆ. ನಿಮಗೆ ಆ ಆಫರ್ ಬಂದಿದೆ. ಈ ಆಫರ್ ಬಂದಿದೆ, ಅಷ್ಟು ಹಣ ಕಟ್ಟಿ, ಅಂತೆಲ್ಲ ಬಂದಿರುವ ಮೋಸದ ಜಾಲವನ್ನು ನೀವೆಲ್ಲ ನೋಡಿದ್ದೀರಿ. ಈಗ ಇದಕ್ಕೆ ಒಂದು ಹೊಸ ಸೇರ್ಪಡೆ ಸ್ನಾಪ್ ಇಟ್. ಹೌದು ಇದೊಂದು ವಂಚನೆಯ ಬೃಹತ್ ಜಾಲ. ನಿಮಗೆ ಈ ಕೆಳಗಿನಂತೆ ಮೊಬೈಲ್ ಗೆ ಸಂದೇಶ ಬರುತ್ತದೆ.

Your 8000 cash loan has been approved Please withdraw cash within 8 hours!

ಇದರ ಜೊತೆಗೆ ಒಂದು ಲಿಂಕ್ ಬರುತ್ತದೆ. ನೀವು ಆ ಲಿಂಕ್ ಒತ್ತದ ಕೂಡಲೇ ಒಂದು ಆಪ್ ನಿಮ್ಮ ಮೊಬೈಲ್ ನಲ್ಲಿ ಸೇರಿಕೊಂಡು ನಿಮ್ಮ ಮೊಬೈಲ್ ಗ್ಯಾಲರಿ, ಪೋನ್ ವಿವರಕ್ಕೆ ಹೋಗಲು ಅನುಮತಿ ಕೇಳುತ್ತದೆ. ಅನುಮತಿ ಕೊಟ್ಟರೆ ಮುಗೀತು. ಸ್ವಲ್ಪ ಸಮಯದ ನಂತರ ನಿಮಗೆ ಲೋನ್ ಅಪ್ರೂವ್ ಆಗಿಲ್ಲ ಅಂತ ಸಂದೇಶ ಬರುತ್ತದೆ. ಸ್ವಲ್ಪ ದಿನ ನಂತರ ಅವರ ಆಟ ಶುರುವಾಗುತ್ತದೆ. ನಿಮ್ಮ ಕಾಂಟೆಕ್ಟ್ ವಿವರ, ನಿಮ್ಮ ಪೋಟೋ, ನಿಮ್ಮ ಬ್ಯಾಂಕ್ ವಿವರ ಎಲ್ಲ ಅವರ ಬಳಿ ಸೇರಿರುತ್ತದೆ. ಒಂದು ಲಿಂಕ್ ಕೊಟ್ಟು ಇದಕ್ಕೆ ಹಣ ಹಾಕಿ ಇಲ್ಲವಾದರೆ, ನಿಮ್ಮ ಎಲ್ಲಾ ಫೋಟೋ ಎಲ್ಲರಿಗೂ ಕಳಿಸ್ತೇನೆ, ನಿಮ್ಮ ವಿಡಿಯೋ ಮಾಡ್ತೇನೆ ಅಂತ ಬ್ಲಾಕ್ ಮೇಲೆ ಮಾಡೋದಕ್ಕೆ ಶುರು ಮಾಡ್ತಾರೆ. ಮರ್ಯಾದೆಗೆ ಅಂಜಿ ಮೊತ್ತವನ್ನು ಹಾಕಿದ್ರೆ ಅದೇ ತರಹ ಹೇಳಿಕೊಂಡು 10-15 ಜನ ಬರ್ತಾರೆ. ಈತರಹದ ಸಮಸ್ಯೆ ಬಂದರೆ ಕೂಡಲೇ ಪೋಲೀಸ್ ಸ್ಟೇಶನ್ ಗೆ ದೂರು ಕೊಡಿ. ಇಂತಹ ಸಂದೇಶಗಳಿಂದ ವಂಚಿತರಾಗಬೇಡಿ……