Breaking News

ಕಿಚ್ಚ ಮತ್ತೊಂದು ಚಿತ್ರಕ್ಕೆ ವಿಲನ್​ ಆಗೋಕ್ಕೆ ಗ್ರೀನ್ ಸಿಗ್ನಲ್..!

ಮತ್ತೊಮ್ಮೆ ಖಳನಟನಾಗಿ ಅಬ್ಬರಿಸಲು ರೆಡಿಯಾದ ಕಿಚ್ಚ....

SHARE......LIKE......COMMENT......

ಸಿನಿಮಾ:

​ಬಾಲಿವುಡ್, ಟಾಲಿವುಡ್, ಕಾಲಿವುಡ್​ ನಲ್ಲಿ ಈಗಾಗ್ಲೇ ಬಿಗ್​ ಸ್ಟಾರ್​ಗಳ ಎದುರು ನೆಗೆಟಿವ್ ಶೇಡ್​ನಲ್ಲಿ ಕಿಚ್ಚ ಸುದೀಪ್ ಮಿಂಚಿದ್ದಾರೆ. ಎಲ್ಲಾ ಸಿನಿಮಾಗಳಲ್ಲೂ ಸೂಪರ್​ ಪರ್ಫಾಮೆನ್ಸ್​ ಕೊಟ್ಟು, ಪರಭಾಷಾ ದಿಗ್ಗಜರು ಮತ್ತು ಸಿನಿಪ್ರಿಯರಿಂದ ಶಹಬ್ಬಾಸ್​ ಗಿರಿ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ದಬ್ಬಾಂಗ್ 3 ಸಿನಿಮಾದಲ್ಲಿ ವಿಲನ್ ಆಗಿ ಥಿಯೇಟರ್​ನಲ್ಲಿ ಸೌಂಡ್ ಮಾಡ್ತಿರುವಾಗ್ಲೇ, ಕಿಚ್ಚ ಮತ್ತೊಂದು ಚಿತ್ರಕ್ಕೆ ವಿಲನ್​ ಆಗೋಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಈ ಬಾರಿ ಕಿಚ್ಚ ವಿಲನ್​ ಆಗಿ ಟಕ್ಕರ್​ ಕೊಡೋದು ಕಾಲಿವುಡ್​ ಹೀರೋ ಸಿಂಬುಗೆ. ಸಿಂಬು ಅಭಿನಯದ ಹೊಸ ಸಿನಿಮಾ ಮಾನಾಡು ಚಿತ್ರದಲ್ಲಿ ಖಳನಟನಾಗೋಕ್ಕೆ ಗ್ರೀನ್​ ಸಿಗ್ನಲ್ ಕೊಟ್ಟಿದ್ದಾರಂತೆ.

ಮಂಗಾಥ , ಚೆನ್ನೈ 600028 ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ವೆಂಕಟ್ ಪ್ರಭು, ಮಾನಾಡು ಸಿನಿಮಾಗೇ ಆ್ಯಕ್ಷನ್ ಕಟ್ ಹೇಳ್ತಿದ್ದು,ಸುರೇಶ್ ಕಾಮಟ್ಟಿ ಬಂಡವಾಳ ಹಾಕ್ತಿದ್ದಾರೆ..ಇದೊಂದು ಬಿಗ್​ ಬಜೆಟ್ ಸಿನಿಮಾ ಆಗಿದ್ದು, ಈಗಾಗ್ಲೇ ಚಿತ್ರತಂಡ ವಿಲನ್​ ಆಘಿ ಕಿಚ್ಚನನ್ನ ಫಿಕ್ಸ್​ ಮಾಡಿಕೊಂಡಿದ್ದಾರೆ. ಆದ್ರೆ ಈ ಬಗ್ಗೆ ಇನ್ನೇನಿದ್ರು ಕಿಚ್ಚ ಕನ್ಫರ್ಮೇಶನ್ ಕೊಡ್ಬೇಕಿದೆ……