Breaking News

ಕೊಡಗು-ಕೇರಳದಲ್ಲಿ ಪ್ರವಾಹ ನಿಲ್ಲಲು ಈ ‘ಅಗಿಲು’ ಕಾರಣ..!

ಈ ಸೇವೆ ನಡೆಯದಿದ್ದಿದ್ರೆ ದಕ್ಷಿಣ ಭಾರತ ಕೊಚ್ಚಿ ಹೋಗುತ್ತಿತ್ತು....

SHARE......LIKE......COMMENT......

ಚಿಕ್ಕಮಗಳೂರು:
ಕೇರಳ ಮಳೆ ನೀರಿನಲ್ಲಿ ಕೊಚ್ಚಿ ಹೋಯ್ತು. ಕೊಡಗು ಮಳೆಗೆ ಬಿರುಕು ಬಿಟ್ಟಿತು. ಮಲೆನಾಡಿಗರ ಬದುಕು ಮೂರಾ ಬಟ್ಟೆಯಾಗಿ, ಭೂಮಿಯೂ ಅಲ್ಲಲ್ಲಿ ಬಾಯಿ ಬಿಟ್ಟಿತು. ಹಲವಾರು ಗ್ರಾಮಗಳು ಜಲಾವೃತಗೊಂಡಿತು. ಅಂತಹ ಸಮಯದಲ್ಲಿ ಜನರ ನೆರವಿಗೆ ಬಂದಿದ್ದೇ ಅಷ್ಟಗಂಧ ಮತ್ತು ಅಗಿಲು.ಇದೇನಿದು ಹೊಸ ಕಥೆ ಅಂದುಕೊಂಡ್ರಾ! ಅದನ್ನ ತಿಳಿಯಬೇಕು ಈ ಸ್ಟೋರಿ ನೋಡಿ….

ಆ ದೇವರಿಗೆ ಇದೊಂದು ಸೇವೆ ನಡೆಯದಿದ್ದಿದ್ರೆ ದಕ್ಷಿಣ ಭಾರತದಲ್ಲಿ ಈ ಹೊತ್ತಿಗೆ ಏನು ಬೇಕಾದ್ರು ಆಗಿರುತ್ತಿತ್ತು. ನಮ್ಮೆಲ್ಲರ ಪುಣ್ಯ ಹಾಗೇ ಯಾವುದೇ ರೀತಿಯ ಅವಘಡ ಆಗಲಿಲ್ಲ. ಆದರೆ ಕೇರಳ, ಕೊಡಗು, ಕರಾವಳಿ, ಮಲೆನಾಡನ್ನ ಬದುಕಿಸಿದ್ದೇ ಆ ಅಗಿಲು ಅನ್ನೋ ನಂಬಿಕೆ ಇಲ್ಲಿನ ಜನರಿಗಿದೆ.

ಯೆಸ್,ಕೇರಳ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕುಂಭದ್ರೋಣ, ಪುನರ್ವಸು-ಆಶ್ಲೇಷ ಮಳೆಗಳು  ಪ್ರಕೃತಿಗೆ ತೊಡೆ ತಟ್ಟಿ, ನೀನಾ ಇಲ್ಲ ನಾನಾ ಎಂಬಂತೆ ಧಾರಾಕಾರವಾಗಿ ಸುರಿಯಿತು. ಕೇರಳ, ಕೊಡಗು, ಕರಾವಳಿ, ಮಲೆನಾಡಿಗರಿಗೆ ಬದುಕೇ ಮುಗಿಯಿತೆಂಬ ವಾತಾವರಣ ನಿರ್ಮಾಣವಾಗಿ ಹೋಗಿತ್ತು.

ಆಗ ಶೃಂಗೇರಿ ಶ್ರೀ ಭಾರತೀ ತೀರ್ಥ ಸ್ವಾಮೀಜಿಗಳು ಎಲ್ಲರಿಗೂ ನೀಡಿದ್ದೇ ಬದುಕುವ, ಬದುಕಿಸುವ ಭರವಸೆ. ಜೂನ್, ಜುಲೈ, ಆಗಸ್ಟ್ ತಿಂಗಳ ಮಹಾಮಳೆಗೆ ದಕ್ಷಿಣ ಭಾರತವೇ ತತ್ತರಿಸಿ ಹೋಗಿತ್ತು. ಇದು ಪ್ರಕೃತಿ ವಿಕೋಪದ ಮುನ್ಸೂಚನೆಯಾ ಎಂದು ಆಲೋಚಿಸಿ ಶೃಂಗೇರಿ ಶ್ರೀಗಳು ಶೃಂಗೇರಿಯಿಂದ ಕೂಗಳತೆಯ ದೂರದಲ್ಲಿರುವ ಕಿಗ್ಗಾದ ಋಷ್ಯ ಶೃಂಗೇಶ್ವರನಿಗೆ ಅಗಿಲು ಸೇವೆ ಮಾಡುವಂತೆ ಸೂಚನೆ ನೀಡಿದರು. ಅಷ್ಟಗಂಧಗಳಲ್ಲೇ ಶ್ರೇಷ್ಠವಾದ ಅಗಿಲನ್ನ ಆ ದೇವಾಲಯಕ್ಕೆ ಖುದ್ದಾಗಿ ಕಳುಹಿಸಿಕೊಟ್ಟಿದ್ರು.

ಮಳೆ ದೇವ ಎಂದೇ ಖ್ಯಾತಿ ಪಡೆದಿರುವ ಕಿಗ್ಗಾದ ಋಷ್ಯಶೃಂಗೇಶ್ವರನ ಪಾದದಡಿ 3 ದಿನಗಳ ಕಾಲ ಶ್ರೀಗಳು ಕಳಿಸಿದ್ದ ಅಗಿಲನ್ನು ಇಟ್ಟು ಪೂಜೆ ಮಾಡಿದ್ರು. ವಿಶೇಷ ಪೂಜೆಯ ನಂತರ ಅಗಿಲಿನ ಸೇವೆ ಮುಗಿಯುತ್ತಿದ್ದಂತೆ ದಕ್ಷಿಣ ಭಾರತದಲ್ಲಿ ಬದುಕುವ ಆಸೆ ಚಿಗುರೊಡೆದಿತ್ತು. ನಿಧಾನವಾಗಿ ಎಲ್ಲೆಡೆ ವರುಣ ಶಾಂತನಾಗತೊಡಗಿದ್ದು ಕೇರಳ, ಕೊಡಗು, ಕರಾವಳಿ, ಮಲೆನಾಡನ್ನ ವರುಣನ ರಾಕ್ಷಸತ್ವದಿಂದ ಬದುಕಿಸಿದ್ದೇ ಋಷ್ಯಶೃಂಗನೆಂಬ ನಂಬಿಕೆ ಜನಸಾಮಾನ್ಯರದ್ದಾಗಿದೆ…..