ಚಿಕ್ಕಮಗಳೂರು:
ಚಿಕ್ಕಮಗಳೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ದತ್ತ ಜಯಂತಿ ನಡೆಯಲಿದೆ. ಸಾವಿರಾರು ಸಂಖ್ಯೆಯಲ್ಲಿ ದತ್ತಮಾಲಾ ಧಾರಿಗಳು ಮುಳ್ಳಯ್ಯನಗಿರಿಯತ್ತ ಹರಿದು ಬರಲಿದ್ದಾರೆ. ಹೀಗಾಗಿ ಚಿಕ್ಕಮಗಳೂರಿನಲ್ಲಿ ನಿನ್ನೆ ಪೊಲೀಸರು ರೂಟ್ ಮಾರ್ಚ್ ಮಾಡಿದ್ರು. ಬಸವನಹಳ್ಳಿ ರಸ್ತೆ, ಎಂ.ಜಿ ರಸ್ತೆ, ಐಜಿ ರಸ್ತೆ, ಉಪ್ಪಳ್ಳಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಸಾಗಿಹೋದರು. ರೂಟ್ ಮಾರ್ಚ್ನಲ್ಲಿ 4500ಕ್ಕೂ ಹೆಚ್ಚು ಪೊಲೀಸರು ರೂಟ್ ಮಾರ್ಚ್ ಮಾಡಿದ್ರು. ರಾಜ್ಯದ ಮೂಲೆ-ಮೂಲೆಗಳಿಂದ ಚಿಕ್ಕಮಗಳೂರಿಗೆ ದತ್ತಮಾಲಾಧಾರಿಗಳು ಬಂದಿದ್ದಾರೆ…