Breaking News

ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ..!

ವಿರೋಧ ಪಕ್ಷಗಳಿಗೆ ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕತೆಯೇ ಅಸ್ತ್ರ....

SHARE......LIKE......COMMENT......

ನವದೆಹಲಿ:

ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಶುರುವಾಗಲಿದೆ. ಗುಜರಾತ್​​, ಹಿಮಾಚಲ ಪ್ರದೇಶದ ಚುನಾವಣಾ ಅಖಾಡದಲ್ಲಿ ಗುದ್ದಾಡಿದ್ದ ರಾಜಕೀಯ ಪಕ್ಷಗಳು ಸಂಸತ್ತಿನ ಉಭಯ ಸದನಗಳಲ್ಲಿ ಸಮರಕ್ಕೆ ಭರ್ಜರಿ ತಯಾರಿ ಮಾಡಿಕೊಂಡಿವೆ. ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮೀಸಲಾತಿ ಮತ್ತು ಭಾರತ–ಚೀನಾ ಗಡಿ ಸಂಘರ್ಷ ಅಸ್ತ್ರಗಳನ್ನು ಹಿಡಿದು ಕಾಂಗ್ರೆಸ್​ ನೇತೃತ್ವದಲ್ಲಿ ಹೋರಾಟಕ್ಕೆ ಪ್ರತಿಪಕ್ಷಗಳು ಸಜ್ಜಾಗಿವೆ. ವಿಪಕ್ಷಗಳಿಗೆ ತಿರುಗೇಟು ಕೊಡಲು ಸರ್ಕಾರವೂ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಡಿಸೆಂಬರ್​​ 29ರವರೆಗೆ ಸಂಸತ್​​ ಅಧಿವೇಶನ ನಡೆಯಲಿದೆ. 16 ಬಿಲ್​ಗಳನ್ನು ಪಾಸ್​ ಮಾಡಿಕೊಳ್ಳಲು ಸರ್ಕಾರ ತಯಾರಿ ಮಾಡಿಕೊಂಡಿದೆ. ಶಿವಸೇನೆಯ ಏಕನಾಥ್​ ಶಿಂಧೆ ಬಣದ ಸಂಸದರು ಜನಸಂಖ್ಯಾ ನಿಯಂತ್ರಣ ಕಾಯ್ದೆ ಮಂಡಿಸಲು ಸಜ್ಜಾಗಿದ್ದಾರೆ. ಆಪ್​​​​ ಸಂಸದ ಸಂಜಯ್​ ಸಿಂಗ್​​​​ ಓಲ್ಡ್ ಪೆನ್ಷನ್​​ ಸ್ಕೀಂ ವಿಚಾರದ ಮೇಲೆ ಚರ್ಚೆಗೆ ಸಜ್ಜಾಗಿದ್ದಾರೆ, ಭಾರತ್​​ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್​​ ಗಾಂಧಿ ಹೆಜ್ಜೆ ಹಾಕ್ತಿರೋದ್ರಿಂದ ಅಧಿವೇಶನಕ್ಕೆ ಬರೋದು ಡೌಟ್​. ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿದ್ದಾರೆ. ಲೋಕಸಭೆಯಲ್ಲಿ ಸೋನಿಯಾ ಗಾಂಧಿ, ಅಧೀರ್​ ರಂಜನ್​ ಚೌಧರಿ ಲೀಡ್ ಮಾಡೋ ಸಾಧ್ಯತೆ ಇದೆ.