ನವದೆಹಲಿ:
ಆರ್ಜೆಡಿ ಪರಮೋಚ್ಚ ನಾಯಕ ಲಾಲೂ ಪ್ರಸಾದ್ ಯಾದವ್ ಅವ್ರಿಗೆ ಪುತ್ರಿಯೇ ಮೂತ್ರಪಿಂಡ ದಾನ ಮಾಡಿದ್ದಾರೆ. ಹಿರಿಯ ಪುತ್ರಿ ರೋಹಿಣಿ ಆಚಾರ್ಯ ಮೂತ್ರಪಿಂಡ ನೀಡಿದ್ದು, ಕಿಡ್ನಿ ಕಸಿ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಅಪ್ಪ-ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಸಿಂಗಾಪುರ ವೈದ್ಯರು ಮಾಹಿತಿ ನೀಡಿದ್ದಾರೆ. ಐಸಿಯುನಿಂದ ಇಬ್ಬರನ್ನೂ ಸ್ಪೆಷಲ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ ಎಂದು ಲಾಲೂ ಪುತ್ರ, ಬಿಹಾರ ಡಿಸಿಎಂ ತೇಜಸ್ವಿಯಾದವ್ ತಿಳಿಸಿದ್ದಾರೆ. ಮೌಂಟ್ ಎಲೆಜಬೆತ್ ಆಸ್ಪತ್ರೆಯಲ್ಲಿ ಲಾಲೂ ಅವರನ್ನು ದಾಖಲು ಮಾಡಲಾಗಿದೆ. ಮೂತ್ರಪಿಂಡ ವೈಫಲ್ಯದಿಂದಾಗಿ ಲಾಲೂ ಪ್ರಸಾದ್ ಯಾದವ್ ಅಸ್ವಸ್ಥರಾಗಿದ್ದರು.ಎಂಟು ಮಕ್ಕಳಲ್ಲಿ ಲಾಲೂ ಅವರಿಗೆ ರೋಹಿಣಿ ಅಂದ್ರೆ ತುಂಬಾ ಇಷ್ಟ ಹೀಗಾಗಿ ಪ್ರೀತಿ ಪಾತ್ರ ಅಪ್ಪನಿಗೆ ಮಗಳೇ ಮೂತ್ರಪಿಂಡ ದಾನಿಯಾದ್ರು..