Breaking News

ನಾಳೆ ತೋಳ ಚಂದ್ರಗ್ರಹಣ..

ಒಟ್ಟು 4 ಗಂಟೆ 5 ನಿಮಿಷಗಳ ಕಾಲ ದೇಶದಲ್ಲಿ ಗ್ರಹಣ....

SHARE......LIKE......COMMENT......

ಬೆಂಗಳೂರು:

ವರ್ಷದ ಮೊದಲ ಚಂದ್ರ ಗ್ರಹಣ ನಾಳೆ ಗೋಚರಿಸಲಿದೆ. ನಾಳೆ ರಾತ್ರಿ 10.37 ರಿಂದ ಮಧ್ಯರಾತ್ರಿ 2.42 ನಿಮಿಷಗಳ ಕಾಲ ಈ ಗ್ರಹಣ ಗೋಚರಿಸಲಿದೆ. ಒಟ್ಟು 4 ಗಂಟೆ 5 ನಿಮಿಷಗಳ ಕಾಲ ದೇಶದಲ್ಲಿ ಗ್ರಹಣ ಕಾಣಿಸಿಕೊಳ್ಳಲಿದೆ. ಅರೆ ನೆರಳಿನ ಈ ಚಂದ್ರಗ್ರಹಣವನ್ನು ಐರೋಪ್ಯ ಒಕ್ಕೂಟ, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಉತ್ತರ ಅಮೆರಿಕ ಭಾಗಗಳು, ದಕ್ಷಿಣ ಅಮೆರಿಕದ ಪೂರ್ವ ಭಾಗಗಳು, ಪೆಸಿಫಿಕ್‌, ಅಟ್ಲಾಂಟಿಕ್‌, ಹಿಂದೂ ಮಹಾಸಾಗರ, ಆರ್ಕ್‌ಟಿಕ್‌ ಪ್ರದೇಶಗಳಲ್ಲಿ ವೀಕ್ಷಿಸಲು ಸಾಧ್ಯವಾಗಲಿದೆ….