Breaking News

ಹಳೆಯ ವಾಹನಗಳ ನಿಷೇಧ ಕುರಿತ ಹೊಸ ನೀತಿ..!

ವಾಹನ ಸವಾರರಿಗೆ ಕೇಂದ್ರದಿಂದ ಮತ್ತೊಂದು ಶಾಕ್‌....

SHARE......LIKE......COMMENT......

ನವದೆಹಲಿ:

ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಭಾರೀ ದಂಡ ವಿಧಿಸುವ ಕಾಯ್ದೆಯನ್ನು ಇತ್ತೀಚೆಗೆ ಜಾರಿ ಮಾಡಿದ್ದ ಕೇಂದ್ರ ಸರ್ಕಾರ, ವಾಹನಗಳ ಮಾಲೀಕರಿಗೆ ಮತ್ತೊಂದು ಶಾಕ್‌ ನೀಡುವ ಸಾಧ್ಯತೆಯಿದೆ. ಹಳೆಯ ವಾಹನಗಳ ನಿಷೇಧ ಕುರಿತ ಹೊಸ ನೀತಿಯನ್ನು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಅಂತಿಮಗೊಳಿಸಿದ್ದು, ಅದರ ಜಾರಿಗೆ ಹಣಕಾಸು ಸಚಿವಾಲಯ ಮತ್ತು ಪ್ರಧಾನಿ ಕಾರ್ಯಾಲಯ ಕೂಡಾ ಸಮ್ಮತಿ ನೀಡಿದೆ ಎನ್ನಲಾಗಿದೆ. ಹೀಗಾಗಿ ಶೀಘ್ರವೇ ಇದನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಉದ್ದೇಶವನ್ನು ಸಾರಿಗೆ ಸಚಿವಾಲಯ ಹೊಂದಿದೆ ಎಂದು ಮೂಲಗಳು ತಿಳಿಸಿವೆ.ಕಳೆದ 20 ವರ್ಷಗಳಲ್ಲೇ ಭಾರೀ ಪ್ರಮಾಣದ ಕುಸಿತದ ಹಾದಿಗೆ ಸಿಲುಕಿರುವ ಆಟೋಮೊಬೈಲ್‌ ವಲಯದ ಸುಧಾರಣೆ ಮತ್ತು ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ 15 ವ ರ್ಷಗಳಷ್ಟುಹಳೆಯ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರ ಪರೋಕ್ಷ ನಿಷೇಧ ಹೇರುವ ಸಾಧ್ಯತೆ ಇದೆ.

ಹಳೆಯ ವಾಹನಗಳು ರಸ್ತೆಗೆ ಇಳಿಯದಂತೆ ತಡೆಯುವ ನಿಟ್ಟಿನಲ್ಲಿ ಹೊಸ ನೀತಿ ಜಾರಿಗೆ ಸರ್ಕಾರ ನಿರ್ಧರಿಸಿದೆ. ಅದರನ್ವಯ 15 ವರ್ಷ ಹಳೆಯ ಪೆಟ್ರೋಲ್‌ ಮತ್ತು 10 ವರ್ಷ ಹಳೆಯ ಡೀಸೆಲ್‌ ವಾಹನಗಳನ್ನು ಮಾಲೀಕರು ಮರು ನೋಂದಣಿ ಮಾಡಿಸಬೇಕಾಗುತ್ತದೆ……