Breaking News

ಹೊಸ ವರ್ಷದಿಂದ ಗ್ರಾಹಕರಿಗೆ ಶಾಕ್​..!

ಮೊಬೈಲ್​ಗಳಲ್ಲಿ ವಾಟ್ಸ್​ಆ್ಯಪ್ ವರ್ಕ್​ ಆಗಲ್ಲ....

SHARE......LIKE......COMMENT......

ನವದೆಹಲಿ:

ಸಾಮಾಜಿಕ ಜಾಲತಾಣದಲ್ಲಿ ವಾಟ್ಸ್​​ಆ್ಯಪ್​​ ಕಂಪನಿ ತಿಳಿಸಿರುವ ಪ್ರಕಾರ​ ಹೊಸ ವರ್ಷದಿಂದ ತನ್ನ ಕೆಲ ಗ್ರಾಹಕರಿಗೆ ಶಾಕ್​ ನೀಡಲು ಮುಂದಾಗಿದ್ದು, ಈ ಎಲ್ಲ ಮೊಬೈಲ್​ಗಳಲ್ಲಿ  ವಾಟ್ಸ್​​ಆ್ಯಪ್​​ ವರ್ಕ್ ಆಗಲ್ಲ ಎಂಬ ಮಾಹಿತಿ ಹೊರಹಾಕಿದೆ.

ಆಂಡ್ರಾಯ್ಡ್​ ಆವೃತ್ತಿಯ 2.3.3 ಕ್ಕಿಂತಲೂ ಹಳೆ ಮೊಬೈಲ್​, ವಿಂಡೋಸ್​ ಪೋನ್​ 7, ಐಫೋನ್ 3 ಜಿಎಸ್ / ಐಒಎಸ್ 6, ನೋಕಿಯಾ ಸಿಂಬಿಯಾನ್ ಎಸ್ 60 ಮೊಬೈಲ್​ಗಳಲ್ಲಿ ಅದು ತನ್ನ ಸೇವೆ ಸ್ಥಗಿತಗೊಳಿಸಲಿದೆ.

ಈಗಾಗಲೇ ಕಂಪನಿ ತನ್ನ ಬ್ಲಾಗ್​ನಲ್ಲಿ ಬರೆದುಕೊಂಡು ಗ್ರಾಹಕರಿಗೆ ಮಾಹಿತಿ ಸಹ ನೀಡಿತ್ತು. ಈ ಮೊಬೈಲ್​ ಹೊಂದಿರುವ ಗ್ರಾಹಕರು ಹೊಸ ಆಪರೇಟಿಂಗ್​ ಸಿಸ್ಟೀಮ್​ ಅಪ್​ಗ್ರೇಡ್​ ಮಾಡಿಕೊಳ್ಳಲು ಸಹ ತಿಳಿಸಿತ್ತು. ಇನ್ನು ಆಂಡ್ರಾಯ್ಡ್ ಓಎಸ್ ಓಎಸ್ 4.0+,ಐಒಎಸ್ 8+ ಚಾಲನೆಯಲ್ಲಿರುವ ಐಫೋನ್​,ವಿಂಡೋಸ್ ಫೋನ್ 8.1+,ಜಿಯೋಫೋನ್​ ಹಾಗೂ ಜಿಯೋಫೋನ್ 2ಗಳಲ್ಲಿ ವಾಟ್ಸ್ಆ್ಯಪ್​ ಸೇವೆ ಸಿಗಲಿದೆ ಎಂದು ತಿಳಿದು ಬಂದಿದೆ……