Breaking News

ಡಾಕ್ಟರ್ ವರ್ಸಸ್ ಡಾಕ್ಟರ್​​ ಸಂಘರ್ಷದಿಂದ ಓಪಿಡಿ ಬಂದ್..!

ರೋಗಿಗಳು ಹೈರಾಣು….

SHARE......LIKE......COMMENT......

ಬೆಂಗಳೂರು:

ಆಯುರ್ವೇದ ವೈದ್ಯರಿಗೂ ಶಸ್ತ್ರಚಿಕಿತ್ಸೆ ಮಾಡಲು ಅವಕಾಶ ಕೊಡುವ ಕ್ರಮವನ್ನು ವಿರೋಧಿಸಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ವೈದ್ಯರು ವರ್ಸಸ್​ ವೈದ್ಯರ ಸಂಘರ್ಷದಿಂದ ಓಪಿಡಿಗಳು ಬಂದ್​ ಆಗಿದ್ದು ಸಾರ್ವಜನಿಕರು ಪರಡುವಂತಾಗಿದೆ. ಇಂದು ದೇಶದಲ್ಲಿ ವೈದ್ಯರ ಪ್ರತಿಭಟನೆ ನಡೆಯುತ್ತಿದ್ದು ಕೇಂದ್ರ ಸರ್ಕಾರವು ಸ್ನಾತಕೋತ್ತರ ಆಯುರ್ವೇದ ಶಿಕ್ಷಣ ನಿಯಮಾವಳಿಗಳ ತಿದ್ದುಪಡಿಯನ್ನು ಹೊರಡಿಸಿದೆ. ಎಂ.ಎಸ್​ ಶಲ್ಯ ತಂತ್ರ ಹಾಗೂ ಎಂ.ಎಸ್​ ಶಾಲ್ಯಕ ತಂತ್ರ ಸ್ನಾತಕೋತ್ತರ ವಿಷಯಗಳನ್ನು ಸೇರ್ಪಡೆ ಮಾಡಲಾಗಿದ್ದು ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶನ್ನೂ ಕಲ್ಪಿಸಿ ಕೊಟ್ಟಿದೆ.

ಇದನ್ನು ವಿರೋಧಿಸಿ ಭಾರತೀಯ ವೈದ್ಯರ ಸಂಘದ ಈ ಮುಷ್ಕರದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ರೊಗಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಕಾರ್ಯನಿರ್ವಹಿಸಲು ಅಗತ್ಯ ಕ್ರಮಕೈಗೊಳ್ಳಲು ವೈದ್ಯಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ. ಈ ಅವಧಿಯಲ್ಲಿ ಸರ್ಕಾರಿ ವೈದ್ಯರು ರಜೆ ಮಾಡದಂತೆ ಆರೋಗ್ಯ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಸಾಕಷ್ಟು ಎಚ್ಚರಿಕೆಯ ನಡುವೆಯೂ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುವಾಗ ಅನಾಹುತಗಳು ನಡೆಯುವ ಸಂಭವವಿರುತ್ತದೆ. ಇನ್ನೂ ಆಯುರ್ವೇದ ಪಧವೀಧರರಿರು ಶಸ್ತ್ರ ಚಿಕಿತ್ಸೆ ಮಾಡುವುದು ಸರಿಯಲ್ಲ ಹೀಗಿರುವಾಗ ಸರ್ಕಾರದ ಈ ತಿದ್ದುಪಡಿಯನ್ನು ಹಿಂತೆಗೆಯಬೇಕು ಎಂದು ಐಎಎಂ ಕರ್ನಾಟಕ ಶಾಖೆಯ ಕಾರ್ಯದರ್ಶಿ ಡಾ. ಎಸ್​ ಎಂ. ಪ್ರಸಾದ್​ ಹೇಳಿದರು……