Breaking News

ಮೂಲೆ ಗುಂಪಾಗುತ್ತಿರುವ ಗರಡಿ ಮನೆಗಳು..!

ಗತಕಾಲದ ವೈಭವಕ್ಕೆ ಸರ್ಕಾರದ ಮೊರೆ....

SHARE......LIKE......COMMENT......

ಹಾವೇರಿ:
ಒಂದು ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ದೇಹ ಕಟುಮಸ್ತಾದ ಯುವಕರನ್ನ ಕಂಡರೇ ಸಾಕು, ಏನಪ್ಪಾ ಗರಡಿ ಮನೆಯಲ್ಲಿ ಎಷ್ಟು ಗಂಟೆ ತಾಲೀಮು ಮಾಡ್ತಿಯಾ ಎಂದು ಪ್ರಶ್ನಿಸುವ ಕಾಲವಿತ್ತು. ಆದರೆ ಪ್ರಸ್ತುತ ಗರಡಿಮನೆಗಳು ಮೂಲೆಗುಂಪಾಗುತ್ತಿವೆ.

ಒಂದು ಕಾಲದಲ್ಲಿ ಯುವಕರ ಅಂಗಸೌಷ್ಟವ ಕಾಯುತ್ತಿದ್ದ ಗರಡಿಮನೆಗಳು ಬಾಗಿಲು ಹಾಕಲಾರಂಭಿಸಿವೆ. ಗರಡಿಮನೆಯ ತಾಲೀಮು, ರಾಗಿ ಅಂಬಲಿ, ಬಿಸಿಬಿಸಿ ರೊಟ್ಟಿ ತಿನ್ನುವ ಮೇಲೆ ಯುವಕರ ವೇತನ ಸಹ ನಿಗಧಿಪಡಿಸಲಾಗುತ್ತಿತ್ತು. ಈ ಗರಡಿ ಮನೆಗಳೇ ಅಂದು ಕುಸ್ತಿಪಟುಗಳನ್ನು ಪೈಲ್ವಾನರನ್ನು ಜಟ್ಟಿಗಳನ್ನ ತಯಾರಿಸುತ್ತಿದ್ದವು. ಆದರೆ ಪ್ರಸ್ತುತ ಗರಡಿಮನೆಗಳ ಜಾಗದಲ್ಲಿ ಜಿಮ್‌ಗಳು ಆಗಮಿಸಿವೆ. ಆಧುನಿಕ ಜೀವನಶೈಲಿಗೆ ತಕ್ಕಂತೆ ಜಿಮ್‌ಗಳು ಉದಯವಾಗಲಾರಂಭಿಸಿವೆ.

ಒತ್ತಡದ ವ್ಯಾಯಾಮಗಳು ಜಂಕ್​ಪುಡ್‌ಗಳಿಗೆ ಯುವಕರು ಮರಳಾಗುತ್ತಿರುವುದಕ್ಕೆ ಪೈಲ್ವಾನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಗರಡಿಮನೆಯಲ್ಲಿ ಸಹಜ ವ್ಯಾಯಾಮ ದೇಸಿ ಊಟ ನೀಡುವ ಸುಖ ಇದರಲ್ಲಿ ಇಲ್ಲ ಎಂಬ ಆರೋಪಗಳನ್ನ ಗರಡಿಮನೆಯ ಗಾರುಡಿಗರು ವ್ಯಕ್ತಪಡಿಸುತ್ತಿದ್ದಾರೆ.ಗತಕಾಲಕ್ಕೆ ಸೇರುತ್ತಿರುವ ಗರಡಿಮನೆಗಳಿಗೆ ಸರ್ಕಾರ ಕಾಯಕಲ್ಪ ಒದಗಿಸಬೇಕಿದೆ. ಪ್ರಸ್ತುತ ದಿನಗಳಲ್ಲಿ ಕಡಿಮೆ ವಯಸ್ಸಿನಲ್ಲಿ ಎದುರಾಗುತ್ತಿರುವ ರಕ್ತದೋತ್ತಡ, ಸಕ್ಕರೆ ಖಾಯಿಲೆ ಸೇರಿದಂತೆ ಮಾನಸಿಕ ರೋಗಗಳಿಂದ ಯುವಕರನ್ನು ವಿಮುಕ್ತ ಮಾಡಬೇಕಿದೆ……