ನವದೆಹಲಿ:
ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಭಯಂಕರವಾಗಿ ಏರಿಕೆಯಾಗುತ್ತಿದೆ ನಿನ್ನೆ ಒಂದೇ ದಿನ 2004ಮಂದಿ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಇನ್ನು ಕಳೆದ 24 ಗಂಟೆಯಲ್ಲಿ 11 ಸಾವಿರದ 90 ಮಂದಿಗೆ ಸೋಂಕು ತಗುಲಿದ್ರೆ, ಕಿಲ್ಲರ್ ಕರೋನಾಗೆ ಈವರೆಗೆ ಬರೋಬ್ಬರಿ 11,921 ಮಂದಿ ಸಾವನ್ನಪ್ಪಿದ್ದಾರೆ. 1ಲಕ್ಷದ 87 ಸಾವಿರಕ್ಕೂ ಹೆಚ್ಚು ಮಂದಿ ಈಗಾಗಲೇ ವೈರಸ್‌ನಿಂದ ಮುಕ್ತರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೋನಾ ಸಾವಿನ ಬೇಟೆ ಮುಂದುವರೆದಿದ್ದು, ಈಗಾಗಲೇ 1 ಲಕ್ಷದ 13 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೋನಾ ಹರಡಿದ್ರೆ, 5537 ಮಂದಿ ಡೆಡ್ಲಿ ವೈರಸ್ಗೆ ಬಲಿಯಾಗಿದ್ದಾರೆ. ತಮಿಳುನಾಡು, ದೆಹಲಿಯಲ್ಲೂ ಕೊರೋನಾ ರಣಕೇಕೆ ಮುಂದುವರೆದಿದೆ…