ಕಲಬುರಗಿ:
ಕಲಬುರಗಿಯ ಕಮಲಾಪುರದಲ್ಲಿ ಇಂದು ಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ 7 ಮಂದಿ ಬೆಂಕಿಯ ಕೆನ್ನಾಲಿಗೆ ಸಿಲುಕಿ ಬೆಂದು ಹೋಗಿದ್ದಾರೆ, ಬೆಳಗ್ಗೆ ಸುಮಾರು 6.30ರಲ್ಲಿ ಈ ದುರ್ಘಟನೆ ನಡೆದಿದ್ದು ಬಸ್ ತೆಲಂಗಾಣದ ಹೈದ್ರಾಬಾದ್ನಿಂದ ಗೋವಾಗೆ ಹೊರಟಿದ್ದು ಬೀದರ್-ಶ್ರೀರಂಗಪಟ್ಟಣ ಹೆದ್ದಾರಿಯ ಚಾರ್ ಕಮಾನ್ ಬಳಿ ಬಸ್ ಅಪಘಾತವಾಗಿದೆ.
ಮಿನಿ ಟ್ರಕ್ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ ರಸ್ತೆ ಬದಿಗೆ ಬಿದ್ದು ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ, ಬಸ್ನಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರಯಾಣ ಮಾಡ್ತಾ ಇದ್ದರು ಅದರಲ್ಲಿ 22 ಮಂದಿಯು ಆಸ್ಪತ್ರೆಗೆ ದಾಖಲಾಗಿದ್ದು ಹಲವರಿಗೆ ಗಂಭೀರ ಗಾಯಗಳಾಗಿದೆ…..