ಸಿನಿಮಾ:
ಕಿಚ್ಚ ಸುದೀಪ್ ನಟನೆಯ ಮೋಸ್ಟ್ ಅವೈಟೆಡ್ ಸಿನಿಮಾ. ವಿಕ್ರಾಂತ್ ರೋಣ ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಸೇರಿದಂತೆ ಕೆಲ ಗ್ಲಿಂಪ್ಸ್ಗಳ ಮೂಲಕ ಗಾಂಧಿನಗರದ ಟು ಇಡೀ ವರ್ಲ್ಡ್ ವೈಡ್ ಹೈಪ್ ಕ್ರಿಯೇಟ್ ಮಾಡಿ, ಕಿಚ್ಚನ ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸಿ ಅದೇ ಗುಂಗಿನಲ್ಲಿರುವಂತೆ ಚಿತ್ರತಂಡ ಮಾಡಿದೆ.ಶೂಟಿಂಗ್ ಕಂಪ್ಲೀಟ್ ಮಾಡಿದ ಚಿತ್ರತಂಡ ಸದ್ದಿಲ್ಲದೇ ಜುಲೈ 28ಕ್ಕೆ ರೋಣ ಬೆಳ್ಳಿ ಪರದೆ ಮೇಲೆ ಆರ್ಭಟಿಸಲಿದ್ದಾನೆ ಅಂತ ರಿಲೀಸ್ ಡೇಟ್ ಸಹ ಅನೌನ್ಸ್ ಮಾಡಿದೆ.
ಇದೀಗ ‘ಗಡಂಗ್ ರಕ್ಕಮ್ಮ’ ಸಾಂಗ್ವೊಂದನ್ನ ರಿಲೀಸ್ ಮಾಡಿದೆ ಚಿತ್ರತಂಡ. ಯೆಸ್ ಈ ‘ಗಡಂಗ್ ರಕ್ಕಮ್ಮ’ ವಿಕ್ರಾಂತ್ ರೋಣ ಸಿನಿಮಾದ ಸ್ಪೆಷಲ್ ಸಾಂಗ್. ಈ ಸಾಂಗ್ಗೆ ಅಭಿನಯು ಚಕ್ರವರ್ತಿ ಜೊತೆ ಕುಣಿದು ಕುಪ್ಪಳಿಸಿದ್ದಾರೆ ಶ್ರೀಲಂಕಾ ಸುಂದ್ರಿ ಜಾಕ್ವಲಿನ್ ಫರ್ನಾಂಡಿಸ್. ಈ ಸಾಂಗ್ ನ ಕನ್ನಡದಲ್ಲಿ ಇಂದು ರಿಲೀಸ್ ಮಾಡಿದ್ದಾರೆ,ಇನ್ನು ಈ ಸಾಂಗ್ 4ದಿನ 4ಭಾಷೆಗಳಲ್ಲಿ ‘ರಕ್ಕಮ್ಮ’ ಸಾಂಗ್ ರಿಲೀಸ್ ಮಾಡಲಿದ್ದಾರೆ…