ಬ್ಯೂಟಿ ಟಿಪ್ಸ್:
ಇಂದು ಎಲ್ಲಾ ಕಡೆ ಸೆಲ್ಫಿ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಾ ಇದೆ. ಹುಡುಗರೇ ಇರಬಹುದು ಅಥವಾ ಹುಡುಗಿಯರು ಇಬ್ಬರೂ ಸಹ ಈ ಸೆಲ್ಫಿ ಕ್ರೇಜಿಗೆ ಒಳಗಾಗಿದ್ದಾರೆ. ಹಾಗಾದರೆ ಸೆಲ್ಫಿ ತೆಗೆಯುವಾಗ ನೀವು ಸಹ ಸುಂದರವಾಗಿಯೇ ಕಾಣಿಸಿಕೊಳ್ಳಬೇಕಲ್ಲವೇ..?ಹಾಗಾದರೆ ಈ ಟಿಪ್ಸ್ಗಳನ್ನು ಅಳವಡಿಸಿಕೊಳ್ಳಿ….
*ಮೇಕಪ್ ಹೀಗಿರಲಿ :
ಸೆಲ್ಫಿ ಯಾವ ಜಾಗದಲ್ಲಿ ಯಾವ ಸಂದರ್ಭದಲ್ಲಿ ತೆಗೆಯುತ್ತೀರಿ ಎಂಬುದು ನಿಮ್ಮ ಧ್ಯಾನದಲ್ಲಿರಲಿ. ನೀವು ಕಾಲೇಜಿನಲ್ಲಿ ಸೆಲ್ಫಿ ತೆಗೆಯುತ್ತೀರಿ ಎಂದಾದರೆ ನೀವು ನ್ಯೂಡ್ ಮೇಕಪ್ ಹಾಕಿ ಫೋಟೊ ತೆಗೆಯಿರಿ. ನಿಮ್ಮ ತ್ವಚೆಗೆ ಸರಿಯಾದ ಮೇಕಪ್ ಮಾಡಿ.
*ಹೊರಗೆ ಫೋಟೊ ತೆಗೆಯುದಾದರೆ :
ನೀವು ಪ್ರಕೃತಿ ಸೌಂದರ್ಯದ ನಡುವೆ ಸೆಲ್ಫಿ ತೆಗೆಯಲು ಇಷ್ಟಪಡುವಿರಾದರೆ ಮೇಕಪ್ ಸ್ವಲ್ಪ ಹೆಚ್ಚಾಗಿಯೇ ಇರಲಿ. ಕಣ್ಣಿಗೆ ಕಾಜಲ್ ಮತ್ತು ಮಸ್ಕರಾ ಹಚ್ಚಿ. ಅದೇ ರೀತಿ ಲೈಟ್ ಆಗಿ ಫೌಂಡೇಶನ್ ಹಚ್ಚಿ. ನಂತರ ಟ್ರಾನ್ಸುಲೇಟ್ ಪೌಡರ್ ಮತ್ತು ಪಿಂಕ್ ಬಣ್ಣದ ಬ್ಲಶ್ ಹಚ್ಚಿ.
*ಬೇಬಿ ಕ್ರೀಮ್ ಪ್ರಯೋಗ :
ನಿಮ್ಮ ಮುಖಕ್ಕೆ ಸ್ಮೂತ್ ಹಾಗೂ ಡೆಲಿಕೇಟ್ ಲುಕ್ ನೀಡಲು ಬೇಬಿ ಕ್ರೀಮ್ ಹಚ್ಚಬಹುದು. ನಂತರ ಟಿಂಟಿಡ್ ಮಾಶ್ಚರೈಸರ್ ಸಹ ಹಚ್ಚಬಹುದು. ಇದರಿಂದ ನಿಮ್ಮ ಮುಖ ನ್ಯಾಚುರಲ್ ಆಗಿ ಕಾಣಿಸುತ್ತದೆ.
*ಡಾರ್ಕ್ ಐಬ್ರೋ :
ಐಬ್ರೋ ಪೆನ್ಸಿಲ್ನಿಂದ ಡಾರ್ಕ್ ಆಗಿ ಐಬ್ರೋ ಹಚ್ಚಿ. ಇದರಿಂದ ಕ್ಯಾಮೆರಾದ ಮುಂದೆ ಹೆಚ್ಚು ಆಕರ್ಷಿತರಾಗಿ ಕಾಣಿಸಿಕೊಳ್ಳುತ್ತಾರೆ……