Breaking News

ಮುಖದ ಅಂದ ಹೆಚ್ಚಾಗಲು ಈ ಟ್ರೀಟ್​ಮೆಂಟ್ ಉತ್ತಮ..!

SHARE......LIKE......COMMENT......

ಬ್ಯೂಟಿ ಟಿಪ್ಸ್:

ನೈಸರ್ಗಿಕವಾಗಿಯೇ ಮುಖದ ಅಂದ ಹೆಚ್ಚಿಸಿದರೆ ಅದು ಹೆಚ್ಚು ಕಾಲದವರೆಗೆ ಉಳಿಯುತ್ತದೆ ಎಂಬುದು ಸಾಮಾನ್ಯ ವಿಷಯ. ಆದರೆ ಈ ರೀತಿ ಮಾಡಲು ತ್ವಚೆಯ ಆರೈಕೆ ಹೇಗೆ ಎಂಬುದಕ್ಕೆ ಇಲ್ಲಿದೆ ಸಿಂಪಲ್ ಕೇರ್….

ಸ್ಟೀಮ್​ ಅಥವಾ ಹಬೆಯ ಚಿಕಿತ್ಸೆ ಮುಖದ ಅಂದವನ್ನು ಹೆಚ್ಚಿಸುವುದಲ್ಲದೇ, ಪದೇ ಪದೇ ಕಾಡುವ ತ್ವಚೆಯ ಸಮಸ್ಯೆಯಿಂದ ಮುಖದ ಅಂದವನ್ನು ಕಾಪಾಡುತ್ತದೆ.ಸ್ಟೀಮ್​ ಅಥವಾ ಹಬೆಯ ಚಿಕಿತ್ಸೆಯಿಂದ ಏನೆಲ್ಲಾ ಲಾಭ ಇಲ್ಲಿದೆ ನೋಡಿ….

1.ಮೊಡವೆ ನಿವಾರಣೆ: ಮೊಡವೆ ಮೂಡಲು ಮುಖ್ಯ ಕಾರಣ ಮುಚ್ಚಿಹೋದ ಪೋರ್ಸ್​ಗಳು. ಸ್ಟೀಮ್​ ತೆಗೆದುಕೊಳ್ಳುವುದರಿಂದ ಈ ಪೊರ್ಸ್​ಗಳು ತೆರೆದುಕೊಳ್ಳುತ್ತವೆ. ಜೊತೆಗೆ ತ್ವಚೆಯಲ್ಲಿ ಸೇರಿಕೊಂಡಿರುವ ಕೊಳೆ, ಎಣ್ಣೆಯಂಶವನ್ನು ತೆಗೆದು ಹಾಕುತ್ತದೆ. ಇದರಿಂದ ಮೊಡವೆಗಳನ್ನು ತಡೆಯಬಹುದು.

2.ಆ್ಯಂಟಿ ಏಜಿಂಗ್​: ಹಬೆಯನ್ನು ತೆಗೆದುಕೊಳ್ಲುವುದರಿಂದ ಸಿಗುವ ಇನ್ನೊಂದು ಲಾಭವೆಂದರೇ ಆ್ಯಂಟಿ ಏಜಿಂಗ್​. ಇದು ರಕ್ತಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ಚರ್ಮದಲ್ಲಿನ ಟಾಕ್ಸಿನ್​ ಅಂಶವನ್ನು ತೆಗೆಯುತ್ತದೆ, ಹೀಗಾಗಿ ನಿಮ್ಮ ತ್ವಚೆ ಯಂಗ್​ ಆಗಿ ಕಾಣಲು ಸಹಾಯ ಮಾಡುತ್ತದೆ.

3.ಬ್ಲ್ಯಾಕ್​ ಹೆಡ್ಸ್​ ತೆಗೆಯಲು ಸಹಕಾರಿ: ಬ್ಲ್ಯಾಕ್​ ಹೆಡ್ಸ್​ ಮತ್ತು ವಯಟ್​ ಹೆಡ್ಸ್​ ಸಮಸ್ಯೆ ಇರುವವರು ಹಬೆ ಚಿಕಿತ್ಸೆಯನ್ನು ತೆಗೆದುಕೊಂಡರೇ ಉತ್ತಮ. ಸ್ಟೀಮ್​ ಪೋರ್ಸ್​ಗಳನ್ನು ತೆರೆಯುತ್ತವೆ, ಇದರಿಂದ ಬ್ಲ್ಯಾಕ್​ ಹೆಡ್ಸ್​ ಸುಲಭವಾಗಿ ಸ್ವಚ್ಛಗೊಳ್ಳುತ್ತವೆ.

4.ಸತ್ತ ಜೀವಕೋಶಗಳನ್ನು ತೆಗೆದು ಹಾಕುತ್ತದೆ: ಡೆಡ್​ ಸೆಲ್ಸ್​ಗಳು ಸೇರಿಕೊಳ್ಳುವುದರಿಂದ ತ್ವಚೆ ಡಲ್​ ಆಗಿ ಕಾಣುತ್ತದೆ. ಸ್ಟೀಮ್​ ತೆಗೆದುಕೊಳ್ಳುವುದರಿಂದ ಈ ರೀತಿಯ ಸತ್ತ ಜೀವಕೋಶಗಳು ಸ್ವಚ್ಛವಾಗಿ ಮುಖಕ್ಕೆ ಕಾಂತಿ ಸಿಗುತ್ತದೆ……