Breaking News

ವ್ಯಾಯಾಮವಿಲ್ಲದೆ ದೇಹದ ಕೊಬ್ಬು ಕರಗಿಸಿಲು ಸರಳ ಟಿಪ್ಸ್..!

SHARE......LIKE......COMMENT......

ದೈಹಿಕ ಚಟುವಟಿಕೆಗಳೇ ಇಲ್ಲದೆ ಇರುವ ಜೀವನಕ್ರಮ, ಅನಾರೋಗ್ಯಕರ ಆಹಾರ, ವ್ಯಾಯಾಮವಿಲ್ಲದೆ ಇರುವುದು ಇತ್ಯಾದಿಗಳು ದೇಹದಲ್ಲಿ ಕೊಬ್ಬು ಬೆಳೆಯಲು ಪ್ರಮುಖ ಕಾರಣವಾಗಿದೆ. ಹಾಗಾಗಿ ದೇಹದಲ್ಲಿ ಕಾಣಿಸಿಕೊಂಡಿರುವ ಬೊಜ್ಜನ್ನು ಕರಗಿಸಿಕೊಳ್ಳಲು ಹಲವಾರು ರೀತಿಯ ಕಸರತ್ತು ಮಾಡಬೇಕಾಗುತ್ತದೆ. ಕೆಲವರು ಜಿಮ್ ಗೆ ಹೋಗಿ ದೇಹದ ತೂಕ, ಹಾಗೂ ಹೊಟ್ಟೆಯ ಬೊಜ್ಜು ಇಳಿಸಲು ಪ್ರಯತ್ನಿಸುವರು. ಆದರೆ ನೀವು ಆಯುರ್ವೇದವನ್ನು ಬಳಸಿಕೊಂಡು ದೇಹದ ಕೊಬ್ಬನ್ನು ಇಳಿಸಿಕೊಳ್ಳಬಹುದು. ಇದಕ್ಕೆ ಯಾವುದೇ ರೀತಿಯ ವ್ಯಾಯಾಮವು ಬೇಕೆಂದಿಲ್ಲ. ಬನ್ನಿ ಅಂತಹ ಸರಳ ಟಿಪ್ಸ್ ಗಳ ಬಗ್ಗೆ ಮುಂದೆ ಓದಿ….

ಉಗುರುಬೆಚ್ಚಗಿನ ನೀರನ್ನು ಕುಡಿಯಿರಿ

ರಾತ್ರಿ ಊಟದೊಂದಿಗೆ ಉಗುರುಬೆಚ್ಚಗಿನ ನೀರನ್ನು ಕುಡಿಯಿರಿ ಮತ್ತು ಮಲಗುವ ಎರಡು ಗಂಟೆಗೆ ಮೊದಲಿನ ತನಕ ನೀವು ಯಾವುದೇ ಆಹಾರ ಅಥವಾ ನೀರನ್ನು ಸೇವಿಸಬೇಡಿ.

ತಾಮ್ರದ ಬಿಂದಿಗೆ

ತಾಮ್ರದ ಬಿಂದಿಗೆಯಲ್ಲಿ 500 ಮಿ.ಲೀ. ನೀರನ್ನು ರಾತ್ರಿ ವೇಳೆ ಹಾಕಿಡಿ. ಮರುದಿನ ಬೆಳಗ್ಗೆ ನೀವು ಎದ್ದ ಬಳಿಕ ಹಲ್ಲುಜ್ಜಿದ ಬಳಿಕ ಈ ನೀರನ್ನು ಸೇವಿಸಿ. ಇದು ಕರುಳಿನ ಸರಾಗ ಕ್ರಿಯೆಗೆ ನೆರವಾಗುವುದು. ಸೂರ್ಯ ಮೂಡುವ ವೇಳೆ ನೀವು ಒಂದು ಕಿ.ಮೀ. ತನಕ ನಡೆಯಿರಿ

ಕಪ್ಪು ಹುರುಳಿ

50 ಗ್ರಾಂ ಕಪ್ಪು ಹುರುಳಿಯನ್ನು ನೀರಿನಲ್ಲಿ ಹಾಕಿ ಕುದಿಸಿ ಮತ್ತು ಇದನ್ನು ಬೆಳಗ್ಗೆ ಉಪಾಹಾರದೊಂದಿಗೆ ಸೇವಿಸಿ. ಪ್ರತಿನಿತ್ಯ ರಾತ್ರಿ ವೇಳೆ ನೀವು ಬಾರ್ಲಿಯಿಂದ ಮಾಡಿದ ಅನ್ನ ಅಥವಾ ಚಪಾತಿ ತಿನ್ನಿ.

ಹಸಿರು ತರಕಾರಿಗಳು

ಮಧ್ಯಾಹ್ನ ಒಂದು ಗಂಟೆಗೆ ಮೊದಲು ಹಸಿರು ತರಕಾರಿಗಳು, ಎಲೆಗಳು ಮತ್ತು ಗೋಧಿ ಹಿಟ್ಟಿನ ಚಪಾತಿ ಸೇವಿಸಿ. ಬೆಳ್ತಿಗೆ ಅಕ್ಕಿ ಸೇವಿಸಬೇಡಿ. ಇದರ ಬದಲಿಗೆ ಕುಚ್ಚಲಕ್ಕಿ ಸೇವಿಸಿ.

ಅರ್ಧ ಲಿಂಬೆ ಮತ್ತು ಒಂದು ಚಮಚ ಜೇನುತುಪ್ಪ

ನೀರಿಗೆ ಅರ್ಧ ಲಿಂಬೆ ಮತ್ತು ಒಂದು ಚಮಚ ಜೇನುತುಪ್ಪ ಹಾಕಿಟ್ಟು ಬೆಳಗ್ಗೆ ಕುಡಿದರೆ ಬೇಗ ತೂಕ ಇಳಿಸಬಹುದು.ನೀರಿಗೆ ಜೇನುತುಪ್ಪ ಮತ್ತು ಲಿಂಬೆರಸವನ್ನು ಹಾಕಿದ ಬಳಿಕ ಅದಕ್ಕೆ ಒಂದು ಚಮಚ ಅರಶಿನ ಹಾಕಿ ಉಗುರುಬೆಚ್ಚಗಿನ ನೀರನ್ನು ಕುಡಿದರೆ ವೇಗವಾಗಿ ಕೊಬ್ಬು ಕರಗುವುದು. ಇದರ ಹೊರತಾಗಿ ನೀವು ಪ್ರತಿದಿನ ಬಿಸಿನೀರನ್ನು ದಿನವಿಡಿ ಸೇವನೆ ಮಾಡುತ್ತಲಿದ್ದರೆ ಆಗ ಯಾವುದೇ ವ್ಯಾಯಾಮವಿಲ್ಲದೆ ತಿಂಗಳಿಗೆ ಎರಡು ಕಿ.ಲೋ. ತೂಕ ಇಳಿಸಬಹುದು.

ವೇಗವಾಗಿ ತೂಕ ಕಳೆದುಕೊಳ್ಳಲು ಆಯುರ್ವೇದದ ವಿಧಾನ

ಶುಂಠಿ ಹುಡಿ, ಕಪ್ಪುಕರಿಮೆಣಸು, ಉದ್ದ ಮೆಣಸನ್ನು ಸಮಾನ ಪ್ರಮಾಣದಲ್ಲಿ ಸೇರಿಸಿಕೊಳ್ಳಿ ಮತ್ತು ಇಷ್ಟೇ ಪ್ರಮಾಣದ ತ್ರಿಫಲ ಚೂರ್ಣ ಹಾಕಿಕೊಳ್ಳಿ. ಎಲ್ಲವನ್ನು ಹುರಿದುಕೊಂಡು ಹುರಿದುಕೊಂಡು ಇದಕ್ಕೆ ಎರಡು ಚಮಚ ಜೀರಿಗೆ ಹುಡಿ ಮತ್ತು ಅರ್ಧ ಚಮಚ ಹಿಂಗು ಹಾಕಿ. ಈ ಮಿಶ್ರಣದ ಒಂದು ಚಮಚ ಹುಡಿಯನ್ನು ಒಂದು ಚಮಚ ಜೇನುತುಪ್ಪದ ಜತೆಗೆ ಸೇರಿಸಿಕೊಂಡು ಅದನ್ನು 200 ಮಿ.ಲೀ. ಬಿಸಿ ನೀರಿನೊಂದಿಗೆ ಸೇರಿಸಿ ಕುಡಿಯಿರಿ. ಇದು ಎರಡು ತಿಂಗಳಲ್ಲಿ ಕೊಬ್ಬನ್ನು ಕರಗಿಸುವುದು. ಇದರ ಹೊರತಾಗಿ ನೀವು ತುಪ್ಪ, ಬೆಣ್ಣೆ, ಕರಿದ ತಿಂಡಿಗಳು, ಎಣ್ಣೆಯ ಆಹಾರ, ಸಿಹಿ, ಚಾಕಲೇಟ್ ಕಡೆಗಣಿಸಿ ಮತ್ತು ಹಗಲಿನ ಹೊತ್ತು ಮಲಗಬೇಡಿ.

ಬಿಸಿ ನೀರು ಮತ್ತು ತಾಜಾ ನಿಂಬೆ

ತಾಜಾ ನಿಂಬೆ ಕೆಲವು ಕಿಣ್ವಗಳನ್ನು ಹೊಂದಿರುತ್ತದೆ. ಅದು ನಿಮ್ಮ ಪಿತ್ತಜನಕಾಂಗವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ ಯಕೃತ್ತಿನ ಕೆಲಸವನ್ನು ಸುಗಮವಾಗಿ ನೆರವೇರುವಂತೆ ಮಾಡುತ್ತದೆ. ಯಕೃತ್ತಿನಿಂದಲೇ ಕೊಬ್ಬು ಬಿಡುಗಡೆಯಾಗುತ್ತದೆ. ಹಾಗಾಗಿ ನೀವು ಮುಂಜಾಣೆ ಎದ್ದ ತಕ್ಷಣ ಬಿಸಿ ನೀರಿಗೆ ತಾಜಾ ನಿಂಬೆ ರಸವನ್ನು ಸೇರಿಸಿ ಕುಡಿಯುವುದರಿಂದ ಕೊಬ್ಬನ್ನು ಬಲು ಸುಲಭವಾಗಿ ಕರಗಿಸ ಬಹುದು. ಆದರೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಸೇವಿಸಬೇಕು. ಇದನ್ನು ಸೇವಿಸಿದ ಬಳಿಕ ಸುಮಾರು ಅರ್ಧ ಗಂಟೆಯವರೆಗೆ ಏನನ್ನೂ ತಿನ್ನುವುದು ಅಥವಾ ಕುಡಿಯುವುದನ್ನು ಮಾಡಬಾರದು.

ಶುಂಠಿ ಚಹಾಕ್ಕೆ ನಿಂಬೆ ಮತ್ತು ಜೇನುತುಪ್ಪದ ಮಿಶ್ರಣ

ಶುಂಠಿ ತುಂಬಾ ಆರೋಗ್ಯಕರ ಮಸಾಲೆ ಎಂದು ನಮಗೆ ತಿಳಿದಿದೆ ಏಕೆಂದರೆ ಅದು ದೇಹವು ಜೀರ್ಣಕಾರಿ ಕಿಣ್ವಗಳನ್ನು ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ. ಶುಂಠಿ ಸಹ ಥರ್ಮೋಜೆನಿಕ್ ಏಜೆಂಟ್. ಮೂಲಭೂತವಾಗಿ ಥರ್ಮೋಜೆನಿಕ್ ಏಜೆಂಟ್ ಗಳು ದೇಹ ಉಷ್ಣಾಂಶವನ್ನು ಮತ್ತು ಕೊಬ್ಬುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಕರಗಿಸಲು ಸಹಾಯ ಮಾಡುತ್ತದೆ. ಒಂದು ಪಾತ್ರೆಯಲ್ಲಿ ನೀರು ಮತ್ತು ಶುಂಠಿಯನ್ನು ಬೆರೆಸಿ, 5 ನಿಮಿಷಗಳಕಾಲ ಸಣ್ಣ ಉರಿಯಲ್ಲಿ ಕುದಿಯಲು ಬಿಡಬೇಕು. ಉರಿಯನ್ನು ಆರಿಸಿದ ನಂತರ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ, ಸೇವಿಸಬೇಕು. ದೇಹ ಮತ್ತು ಹೊಟ್ಟೆ ಭಾಗದ ಕೊಬ್ಬನ್ನು ಕರಗಿಸಲು ಕಡಿಮೆ ಎಂದರೂ ದಿನದಲ್ಲಿ ಎರಡು ಬಾರಿ ಶುಂಠಿ ಚಹಾವನ್ನು ಸೇವಿಸಬೇಕು.

ಮೆಂತೆ ನೀರು

ಮೆಂತೆಯು ತುಂಬಾ ಕಹಿಯಾಗಿರುವುದು. ಆದರೆ ಇದು ಕೊಬ್ಬು ಕರಗಿಸಲು ತುಂಬಾ ಪರಿಣಾಮಕಾರಿ. ಇದರಲ್ಲಿ ಹೆಚ್ಚಿನ ಮಟ್ಟದ ನಾರಿನಾಂಶವಿದ್ದು, ಕಾರ್ಬ್ರ್ಸ್ ಮತ್ತು ಕೊಲೆಸ್ಟ್ರಾಲ್ ಕಡಿಮೆಯಿದೆ. ಇದು ಕೊಬ್ಬು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಹೊಟ್ಟೆಯ ಕೊಬ್ಬು ಕರಗಿಸಲು ಇದು ತುಂಬಾ ಪರಿಣಾಮಕಾರಿ. ಒಂದು ಚಮಚ ಮೆಂತ್ಯೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದು ಈ ನೀರನ್ನು ಬಿಸಿ ಮಾಡಿಕೊಂಡು ಕುಡಿಯಿರಿ……