Breaking News

ಗ್ರಾಹಕರಿಗೆ ಶಾಕ್​ ನೀಡಿದ ಕೇಂದ್ರ ಸರ್ಕಾರ..!

ಗೃಹ ಬಳಕೆಯ ಎಲ್‌ಪಿಜಿ ಬೆಲೆ ಏರಿಕೆ….

SHARE......LIKE......COMMENT......

ಬೆಂಗಳೂರು:

ಕೇಂದ್ರ ಸರ್ಕಾರ ಮತ್ತೆ ಗೃಹ ಬಳಕೆಯ ಎಲ್‌ಪಿಜಿ ಬೆಲೆಯನ್ನ ಪ್ರತಿ ಸಿಲಿಂಡರ್‌ಗೆ 50 ರೂಪಾಯಿ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್​ ನೀಡಿದೆ. ಅಲ್ಲದೆ, ವಾಯುಯಾನ ಟರ್ಬೈನ್ ಇಂಧನ ಬೆಲೆಯನ್ನು ಶೇಕಡಾ 6.3ರಷ್ಟು ಹೆಚ್ಚಿಸಲಾಗಿದೆ. ರಾಜ್ಯ ಇಂಧನ ಮಾರುಕಟ್ಟೆ ಕಂಪನಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಸಬ್ಸಿಡಿ ರಹಿತ ಗೃಹ ಬಳಕೆ 14.2 ಕೆಜಿ ಸಿಲಿಂಡರ್‌ ಬೆಲೆಯನ್ನು ಹಿಂದಿನ 644 ರೂಪಾಯಿಗಳಿಂದ 694 ರೂಪಾಯಿಗೆ ಹೆಚ್ಚಿಸಲಾಗಿದೆ. ಈ ತಿಂಗಳ ದರದಲ್ಲಿ ಇದು ಎರಡನೇ ಬಾರಿಗೆ ಹೆಚ್ಚಳವಾಗಿದ್ದು ಸಿಲಿಂಡರ್‌ಗೆ 50 ರೂಪಾಯಿ ಹೆಚ್ಚಿಸಲಾಗಿತ್ತು. ಇದಕ್ಕೂ ಮುನ್ನ ಜುಲೈನಿಂದ ಸಿಲಿಂಡರ್ ಬೆಲೆ 594 ರೂಪಾಯಿ ಇತ್ತು. ದೆಹಲಿಯಲ್ಲಿ ಜೂನ್ 2019ಕ್ಕೆ 497 ರೂಪಾಯಿ ಇದ್ದ ಸಬ್ಸಿಡಿ ಎಲ್​ಪಿಜಿ ಬೆಲೆಯನ್ನು ಇಲ್ಲಿಯವರೆಗೂ ಕ್ರಮವಾಗಿ 147 ರೂಪಾಯಿ ಹೆಚ್ಚಿಸಲಾಗಿದೆ……