Breaking News

ಎಂಜಿ ರೋಡ್​​,ಬ್ರಿಗೇಡ್​​ ರೋಡ್​ ನ್ಯೂಈಯರ್ ಸೆಲೆಬ್ರೆಶನ್​ಗೆ ಬ್ರೇಕ್..!

ಹೊಸವರ್ಷಕ್ಕೆ ಮನೆಯಲ್ಲೆ ಕೇಕ್ ಕಟ್ ಮಾಡ್ಬೇಕು....

SHARE......LIKE......COMMENT......

ಬೆಂಗಳೂರು:

ಈ ಸಲ ಹೊಸ ವರ್ಷ ಆಚರಣೆ ಮನೆಯಲ್ಲೆ ಇರ್ಬೆಕೆ ಹೊರತು ರಸ್ತೆಗೆ ಬರುವಂತಿಲ್ಲ. ಕೊರೋನ ಎಫೆಕ್ಟ್ ನಿಂದ ಹೊಸ ವರ್ಷದ ಸೆಲೆಬ್ರೆಶನ್​ಗೆ ಪೊಲೀಸ್ ಇಲಾಖೆ ಮತ್ತು ಬಿಬಿಎಂಎಪಿ ಬ್ರೇಕ್ ಹಾಕಿದೆ. ಪ್ರತಿ ವರ್ಷ ಹೊಸವರ್ಷವನ್ನು ದಾಂ ದೂಂ ಅಂತ ಆಚರಣೆ ಮಾಡ್ತಿದ್ದ ಬೆಂಗಳೂರಿಗರು ಈ ಸಲ ಸೈಲೆಂಟ್ ಆಗಿರ್ಬೇಕು. ಬೆಂಗಳೂರಿನ ಹಾಟ್ ಸ್ಪಾಟ್​ಗಳಾದ ಎಂ.ಜಿ ರೋಡ್, ಬ್ರಿಗೇಡ್ ರೋಡ್​ಗಳಲ್ಲಿ ಪ್ರತಿ ವರ್ಷ ಕಾಲಿಡೋದಕ್ಕೂ ಜಾಗ ಇರ್ತಿರ್ಲಿಲ್ಲ. ಪಬ್,ಬಾರ್​ಗಳಲ್ಲಿ ಅಮಲಿನಲ್ಲಿ ತೇಲಾಡುತ್ತಿದ್ದ ಜೋಡಿಗಳೆಷ್ಟೋ.. ಪಡ್ಡೆ ಹುಡುಗರೆಷ್ಟೋ ಎಂಜಾಯ್ಮೆಂಟ್ ಜೊತೆಗೆ ವರ್ಷವೂ ಅಸಭ್ಯ ವರ್ತನೆಯಿಂದ ಬೆಂಗಳೂರಿನ ಮರ್ಯಾದೆಯನ್ನೂ ದೇಶ ಮಟ್ಟದಲ್ಲಿ ಹರಾಜು ಹಾಕಿದ್ದನ್ನೂ ನೋಡಿದ್ದೇವೆ. ಆದ್ರೆ ಈ ವರ್ಷ ಇದ್ಯಾವುದಕ್ಕೂ ನಿಮಗೆ ಅವಕಾಶನೆ ಇರಲ್ಲ.

ಯೆಸ್..ಕೊರೋನ ಎಫೆಕ್ಟ್ ಹೆಚ್ಚಾಗಿರೋದ್ರಿಂದ ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆ ನ್ಯೂ ಈಯರ್ ಸೆಲೆಬ್ರೇಶನ್ ಗೆ ಬ್ರೇಕ್ ಹಾಕಿದೆ. ಎಂ.ಜಿ ರೋಡ್, ಬ್ರಿಗೇಡ್ ರೋಡ್ ಮಾತ್ರವಲ್ಲದೆ ಬೆಂಗಳೂರಿನ ಯಾವುದೇ ರಸ್ತೆಯಲ್ಲೂ ಹೊಸವರ್ಷ ಆಚರಣೆ ಮಾಡುವಂತಿಲ್ಲ. ಅಲ್ಲದೇ ಎಲ್ಲಾ ಬಾರ್, ರೆಸ್ಟೋರೆಂಟ್​ಗಳು ಕೂಡ ಇಲಾಖೆಯ ರೂಲ್ಸ್ ಪಾಲಿಸಬೇಕು. ಹಗಾಗಿ ಹೊಸ ವರ್ಷ ಆಚರಣೆ ಏನಿದ್ರು ನಿಮ್ಮ ನಿಮ್ಮ ಮನೆಯಲ್ಲಿ ಮಾಡಿಕೊಳ್ಳಿ. ರಸ್ತೆಗೆ ಇಳಿದ್ರೆ ಎಚ್ಚರ ಅಂತ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಒಟ್ಟಾರೆ ಕೊರೋನ ಎಫೆಕ್ಟ್ ಈ ಸಲ ಹೊಸ ವರ್ಷದ ಎಂಜಾಯ್ಮೆಂಟ್​ಗೆ ತಟ್ಟಿದ್ದು.. ಕುಡಿದು ಕುಣಿಯಲು ರೆಡಿಯಾಗಿದ್ದವರು ಸೈಲೆಂಟ್ ಆಗಿದ್ದಾರೆ……