Breaking News

9 ವರ್ಷದಲ್ಲಿ ಆಗದ ಕೆಲಸ 4 ತಿಂಗಳಲ್ಲಿ ಮಾಡುವೆ..!

ಉಪ ಚುನಾವಣೆ ಸಭೆಯಲ್ಲಿ ಮಧು ಬಂಗಾರಪ್ಪ ಅಶ್ವಾಸನೆ....

SHARE......LIKE......COMMENT......

ಶಿವಮೊಗ್ಗ;

ಉಪ ಚುನಾವಣೆ ಘೋಷಣೆಯಾದಾಗ ನಾನು ವಿದೇಶದಲ್ಲಿದ್ದೆ. ದೊಡ್ಡವರ ಒತ್ತಾಯದ ಮೇರೆಗೆ ಚುಣಾವಣೆಗೆ ನಿಂತಿದ್ದೇನೆ ಎಂದು ಜೆಡಿಎಸ್​ ಅಭ್ಯರ್ಥಿ ಎಸ್.ಮಧುಬಂಗಾರಪ್ಪ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಹೇಳಿದರು.ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನಾಲ್ಕು ತಿಂಗಳಿಗೋಸ್ಕರ ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದು ಸಮ್ಮಿಶ್ರ ಸರ್ಕಾರದ ನಾಯಕರಿಗೆ ನನ್ನ  ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದೆ.

ಚುನಾವಣೆಗೆ ಮಧು ಬಂಗಾರಪ್ಪ ಸೂಕ್ತ ಅಭ್ಯರ್ಥಿ ಎಂದು ನನ್ನ ತಂದೆಯ ಸಮಾನರು ಕಾಗೋಡು ತಿಮ್ಮಪ್ಪ ಸೇರಿದಂತೆ ಎರಡೂ ಪಕ್ಷದ ಹಿರಿಯ ನಾಯಕರ ಒತ್ತಾಯದ ಕಾರಣಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಕೊಂಡೆ.ಒಂಭತ್ತೂವರೆ ವರ್ಷಗಳಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಯಾಗಿಲ್ಲ. ನಾಲ್ಕೆ ತಿಂಗಳಲ್ಲಿ 9 ವರ್ಷಗಳಲ್ಲಿ ಆಗಬೇಕಿದ್ದ ಅಭಿವೃದ್ಧಿಯನ್ನ ಮಾಡುತ್ತೇನೆ.

ನಾನು ಚುನಾವಣೆಯಲ್ಲಿ ಗೆದ್ದು ಹೋದಾಗ ಯಾರ ಮನೆಯ ಬಾಗಿಲು ಕಾಯಬೇಕಿಲ್ಲ. ನನ್ನ ಅಣ್ಣ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾರೆ. ಅವರ ಬಳಿ ಹೋಗಿ ಅಭಿವೃದ್ಧಿಗೆ ಹಣವನ್ನ ಮಂಜೂರು ಮಾಡಿಸಿಕೊಂಡು ಬರುತ್ತೇನೆ ಎಂದರು.

ನನಗೆ ಸೊರಬದ ಜನರು ಉತ್ತರ ನೀಡಬೇಕಿದೆ. ನನ್ನನ್ನು ಯಾಕೆ ಸೋಲಿಸಿದ್ದೀರಿ. ಇಂದು ನಾನು ಗೆದ್ದಿದ್ದರೆ ಕುಮಾರಸ್ವಾಮಿಯವರ ಸಚಿವ ಸಂಪುಟದಲ್ಲಿ ಸಚಿವನಾಗಿ ಹೆಚ್ಚಿನ ಕೆಲಸ ಮಾಡುವ ಅವಕಾಶ ಸಿಗುತಿತ್ತು. ಅದಕ್ಕೆ ಉತ್ತರ ನೀವೇ ನೀಡಬೇಕಿದೆ ಎಂದು ಸೋಲಿನ ನೋವನ್ನ ಜನರ ಬಳಿ ತೋಡಿಕೊಂಡರು.

ಅವರ ಋಣ ತೀರಿಸಲು ಇದು ಸರಿಯಾದ ಸಮಯ. ಹಾಗಾಗಿ ನಿಮ್ಮ ಬಳಿ ಮನವಿ ಮಾಡಿಕೊಳ್ಳುತ್ತೇನೆ. ಈ ಬಾರಿ ನನ್ನನ್ನು ಗೆಲ್ಲಿಸುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಅವಕಾಶ ಮಾಡಿಕೊಡುವುದು ನಿಮ್ಮ ಕೈಯಲ್ಲಿದೆ ಎಂದು ಜನರಲ್ಲಿ ಮನವಿ ಮಾಡಿಕೊಂಡರು. ನನ್ನ ಗೆಲುವಿನ ಮೂಲಕ ಬಂಗಾರಪ್ಪನವರ ಆತ್ಮಕ್ಕೆ ಶಾಂತಿ ನೀಡಿ ಎಂದರು….