ಬೆಂಗಳೂರು:
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಹಾಗೂ ರೇವತಿ ಮದುವೆ ನಾಳೆಯೇ ನಡೆಯಲಿದೆ. ಕೊರೋನಾ ವೈರಸ್ ಹಿನ್ನೆಲೆ ಬೆಂಗಳೂರಿನಲ್ಲಿ ಮದುವೆ ನೆರವೇರಿಸಲು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಿದ್ಧತೆ ಮಾಡಿಕೊಂಡಿದ್ರು. ಆದ್ರೆ ಬೆಂಗಳೂರು ರೆಡ್ ಜೋನ್ನಲ್ಲಿ ಇರೋದ್ರಿಂದ, ಬಿಡದಿ ಬಳಿಯ ಕೇತಗಾನಹಳ್ಳಿ ಗ್ರಾಮದಲ್ಲಿರುವ ತೋಟದ ಮನೆಯಲ್ಲಿ ವಿವಾಹ ನೇರವೇರಲಿದೆ. ಈ ಬಗ್ಗೆ ಮಾಹಿತಿ ನೀಡಿದ ಕುಮಾರಸ್ವಾಮಿ, ಕೇವಲ ಕುಟುಂಬದ ಆಪ್ತರು ಮಾತ್ರ ಮದುವೆ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ನಿಖಿಲ್-ರೇವತಿ ಜೋಡಿಗೆ ದೂರದಿಂದಲೇ ಶುಭಕೋರಿ ಎಂದು HDK ಮನವಿ ಮಾಡಿದ್ದಾರೆ….