Breaking News

ಬೆಂಗಳೂರಿನಲ್ಲಿ ಸುರೀತಾ ಇದೆಯಂತೆ ಚಿನ್ನದ ಮಳೆ..!?

ಹಳೇ ನಾಣ್ಯದ ರೂಪದಲ್ಲಿರುವ ಚಿನ್ನದ ಬಿಸ್ಕಟ್....

SHARE......LIKE......COMMENT......

ಗುಜರಾತ್:

ಗುಜರಾತ್​​ನ ಸೂರತ್​​ನಲ್ಲಿ ಚಿನ್ನದ ಮಳೆಯ ಸುದ್ದಿ ಭಾರೀ ಸದ್ದು ಮಾಡಿದೆ. ಸೂರತ್​​ ಏರ್​ಪೋರ್ಟ್​ ಸಮೀಪದ ದುಮಾಸ್​ ಗ್ರಾಮದಲ್ಲಿ ಹಳೇ ನಾಣ್ಯದ ರೂಪದಲ್ಲಿರುವ ಚಿನ್ನದ ಬಿಸ್ಕಟ್ ಮಾದರಿ ಬಿಲ್ಲೆಗಳು ಪತ್ತೆಯಾಗಿವೆ.ಚಿನ್ನದ ಬಿಲ್ಲೆಗಳನ್ನು ಹಾರಿಸಿಕೊಳ್ಳಲು ಜನರು ಮುಗಿಬಿದ್ದಾರೆ. ಕಾರ್​​​, ಬೈಕ್​ಗಳಲ್ಲಿ ಬಂದು ಚಿನ್ನಕ್ಕಾಗಿ ಅಲೆದಾಡಿದ್ದಾರೆ. ಈ ಗ್ರಾಮದ ಪಕ್ಕದಲ್ಲೇ ಏರ್​​ಪೋರ್ಟ್​ ಕೂಡಾ ಇದೆ. ಹೀಗಾಗಿ ಯಾರಾದ್ರೂ ಮಾರಾಟಕ್ಕೆ ತಗೆದುಕೊಂಡು ಹೋಗುವಾಗ ಚೆಲ್ಲಿರಬಹುದೇ, ಅಕ್ರಮವಾಗಿ ಸಾಗಿಸುತ್ತಿರುವಾಗ ಸಿಕ್ಕಿ ಬೀಳೋ ಭಯದಲ್ಲಿ ಯಾರಾದ್ರೂ ಎಸೆದು ಹೋಗಿರಬಹುದೇ ಎನ್ನುವ ಕುತೂಹಲ ಮನೆ ಮಾಡಿದೆ. ಇನ್ನು ಇತ್ತ ಬೆಂಗಳೂರಿನಲ್ಲೂ ಸುರೀತಾ ಇದೆಯಂತೆ ಚಿನ್ನದ ಮಳೆ. ಮಳೆಯ ಜತೆ ಚಿನ್ನವೂ ಸುರಿದಿದೆ ಎನ್ನುತ್ತಿದ್ದಾರೆ ಅನೇಕಲ್ ಜನ. ಚಿನ್ನಕ್ಕಾಗಿ ಮುಗಿಬಿದ್ದು ಬಂಗಾರ ಹೆಕ್ಕುವಲ್ಲಿ ಇಲ್ಲಿನ ಜನ ತಲ್ಲೀನರಾಗಿದ್ದಾರೆ. ಗಿಡ ಗಂಟೆಗಳನ್ನು ಲೆಕ್ಕಿಸದೆ ನೂರಾರು ಜನರು ಬಂಗಾರಕ್ಕಾಗಿ ಮುಗಿಬಿದ್ದಿದ್ದಾರೆ. ಪತ್ತೆಯಾದ ಚಿನ್ನದ ನಾಣ್ಯ ಮಾದರಿ ಬಿಲ್ಲೆಗಳ ಮೇಲೆ ಕೆಲವು ಸಿಂಬಲ್​ಗಳಿವೆ. ಹೀಗಾಗಿ ಇವುಗಳನ್ನು ಸಂಗ್ರಹ ಮಾಡಿರೋ ಅಧಿಕಾರಿಗಳು ಪರೀಕ್ಷೆಗೂ ರವಾನೆ ಮಾಡಿದ್ದಾರೆ……