Breaking News

ಕೊಡಗಿನ ಬಾಲ ಪ್ರತಿಭೆ..!

ಬ್ಯಾಡ್ಮಿಂಟನ್​ನಲ್ಲಿ ರಾಷ್ಟ್ರ ಮಟ್ಟದ ಸಾಧನೆ....

SHARE......LIKE......COMMENT......
ಸೈನಾ ನೆಹ್ವಾಲ್, ಅಶ್ವಿನಿ ಪೊನ್ನಪ್ಪ ಮಾದರಿಯಲ್ಲಿ ದೇಶಕ್ಕೆ ಕೀರ್ತಿ ತರಬೇಕು ಎಂದು ಈಗಿನಿಂದಲೇ ಕನಸು ಕಾಣುತ್ತಿದ್ದಾಳೆ.
ಈ ಪುಟ್ಟ ಪೋರಿಯ ಹೆಸರು ದಿನಾ ಭೀಮಯ್ಯ. ಮೂಲತಃ ಕೊಡಗಿನ ಗೋಣಿಕೊಪ್ಪಲು ಗ್ರಾಮದವಳು. ದಿನಾ ಭೀಮಯ್ಯ ಮತ್ತು ಕುಸುಮ್ ದಂಪತಿಯ ಪುತ್ರಿ. ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆ, ಶಾಲೆ, ಜಿಲ್ಲೆ, ರಾಜ್ಯಮಟ್ಟದ ಬ್ಯಾಡ್ಮಿಂಟನ್​ನಲ್ಲಿ ಭಾಗವಹಿಸಿ ಇದೀಗ ಅಂಡರ್ 12 ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿ, ವಿವಿಧ ವಿಭಾಗದಲ್ಲಿ ಎರಡು ಮತ್ತು ಮೂರನೇಯ ಸ್ಥಾನ ಪಡೆದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಪಿಎನ್​ಬಿ ಮೆಟ್ಲೈಫ್ ಸಾಥ್ ಜೋನ್ ಕ್ರೀಡಾಕೂಟದಲ್ಲಿ ತೃತೀಯ ಸ್ಥಾನ, ಎಗೋನ್ ಸಂಸ್ಥೆ ನಡೆಸಿದ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದು 12 ವಯೋಮಿತಿಯ ವಿಭಾಗದಲ್ಲಿ ರಾಜ್ಯದ ಅದರಲ್ಲೂ ಕೊಡಗಿನ ಬಾಲ ಪ್ರತಿಭೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.