Breaking News

ತಮಿಳುನಾಡಿನ ಊಟಿ ಮತ್ತು ನೀಲಗಿರೀಸ್​ ಜಿಲ್ಲೆಗಳಲ್ಲಿ ಭಾರೀ ಮಳೆ..!

ಹತ್ತಕ್ಕೂ ಹೆಚ್ಚು ಕಾರು, ಬಸ್​ಗಳೂ ಜಖಂ....

SHARE......LIKE......COMMENT......

ತಮಿಳುನಾಡು:

ಪನಿ ಚಂಡ ಮಾರುತದ ಮುನ್ನೆಚ್ಚರಿಕೆ ಬೆನ್ನಲ್ಲೇ ತಮಿಳುನಾಡಿನ ಊಟಿ ಮತ್ತು ನೀಲಗಿರೀಸ್​ ಜಿಲ್ಲೆಗಳಲ್ಲಿ ಭಾರೀ ಮಳೆಯಾಗ್ತಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಪ್ರವಾಸಿ ತಾಣಗಳು ತತ್ತರಿಸಿ ಹೋಗಿವೆ. ಆಲಿಕಲ್ಲು ಸಹಿತ ಭಾರೀ ಮಳೆ ಸುರಿಯುತ್ತಿದ್ದು, ಮರಗಳು ಧರೆಗುರುಳಿವೆ. ಭಾರೀ ಗುಡ್ಡಗಳು ರಸ್ತೆಗೇ ಕುಸಿದು ಬೀಳ್ತಿವೆ. ಹೀಗಾಗಿ ಹತ್ತಕ್ಕೂ ಹೆಚ್ಚು ಕಾರು, ಬಸ್​ಗಳೂ ಜಖಂಗೊಂಡಿವೆ. ನೂರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆ ಸಂಪೂರ್ಣ ನಾಶವಾಗಿದೆ. ಅದ್ರಲ್ಲೂ ಮಾವಿನ ಫಸಲಿಗೆ ಭಾರೀ ಹೊಡೆತ ಬಿದ್ದಿದೆ. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಸಹಸ್ರಾರು ಪ್ರವಾಸಿಗರು ಊಟಿ ಮತ್ತು ನೀಲಗಿರೀಸ್ ಪ್ರದೇಶಗಳಿಗೆ ಬಂದಿದ್ದು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ……