Breaking News

ವಿಶ್ವದಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ 61,50,262ಕ್ಕೆ ಏರಿಕೆ…!

ಜಗತ್ತಿನಾದ್ಯಂತ ಈವರೆಗೂ 3,70,500 ಬಲಿಯಾಗಿದ್ದಾರೆ...

SHARE......LIKE......COMMENT......

ಬೆಂಗಳೂರು:

ವಿಶ್ವದಾದ್ಯಂತ ದಿನ ದಿನಕ್ಕೂ ಕೊರೋನಾ ವೈರಸ್ ಆರ್ಭಟ ಮಿತಿ ಮೀರಿದೆ. ವಿಶ್ವದಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಈವರೆಗೂ 61,50,262ಕ್ಕೆ ಏರಿಕೆಯಾಗಿದೆ. ಇನ್ನೂ ಕೊರೋನಾದಿಂದಾಗಿ ಜಗತ್ತಿನಾದ್ಯಂತ ಈವರೆಗೂ 3,70,500 ಬಲಿಯಾಗಿದ್ದಾರೆ ವಿಶ್ವದೊಡ್ಡಣ್ಣ ಅಮೆರಿಕದಲ್ಲಿ 18,16,601 ಮಂದಿಗೆ ಸೋಂಕು ತಗುಲಿದ್ದು ಕೊರೋನಾದಿಂದ ಜೀವ ಕಳೆದುಕೊಂಡವರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ, ಇನ್ನು ಕೊರೋನಾ ಮಾರಿಯಿಂದ ಬಚಾವಾದವರು 27,29,955 ಮಂದಿ,ಅಮೆರಿಕ ನಂತರ ಬ್ರೆಜಿಲ್ನಲ್ಲಿ 4,98,440 ಮಂದಿಗೆ ಕೊರೋನಾ, 28,834 ಮಂದಿ ಬಲಿಯಾಗಿದ್ದಾರೆ ಹಾಗೇ ರಷ್ಯಾದಲ್ಲಿ 3,96,575 ಮಂದಿಗೆ ಕೊರೋನಾ, 4,555 ಬಲಿ ತೆಗೆದುಕೊಂಡಿದೆ ಇನ್ನು ಸ್ಪೇನ್ನಲ್ಲಿ 2,86,308 ಮಂದಿ ಸೋಂಕು ಇದ್ದು, 27,125 ಮಂದಿ ಸಾವಿಗೀಡಾಗಿದ್ದಾರೆ. ಇನ್ನು ಇಟಲಿಯಲ್ಲಿ 2,32,664 ಮಂದಿಗೆ ಕೊರೋನಾ, 33,340 ಸಾವು ಹಾಗೂ ಫ್ರಾನ್ಸ್ನಲ್ಲಿ ಸೋಂಕಿತರ ಸಂಖ್ಯೆ 1,88,625 ಏರಿಕೆಯಾಗಿದ್ದು ಸಾವಿನ ಸಂಖ್ಯೆ 28,771ರಷ್ಟಿದೆ……