Breaking News

14 ಲಕ್ಷ ಬೋನಸ್ ಕೊಟ್ಟ ಕಂಪನಿ..!

ಕ್ರಿಸ್‌ಮಸ್ ಹಬ್ಬಕ್ಕೆ ಭರ್ಜರಿ ಗಿಫ್ಟ್......

SHARE......LIKE......COMMENT......

ಮಿಚಿಗನ್:

ಅಮೆರಿಕಾದ ಖಾಸಗಿ ಕಂಪನಿಯೊಂದು ಕ್ರಿಸ್‌ಮಸ್ ಬೋನಸ್ ಆಗಿ ಪ್ರತಿ ನೌಕರನಿಗೆ ತಲಾ $20,000 ಅಂದರೆ  ಸುಮಾರು 14 ಲಕ್ಷ  ನೀಡಿದೆ.. ಕರಕುಶಲ ಮತ್ತು ಹೂವಿನ ಕಂಪೆನಿಯಾದ ಫ್ಲೋರಾಕ್ರಾಫ್ಟ್ ತನ್ನ ಕಂಪನಿಯ 200 ಉದ್ಯೋಗಿಗಳಿಗೆ ನೀಡಿರುವ ಒಟ್ಟು ಬೋನಸ್ ಮೊತ್ತ 4 ಮಿಲಿಯನ್ .

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಿಯೋ ಶ್ಕೊನೆರ್ ಕರ್ತವ್ಯನಿಷ್ಠೆಯಿಂದ ದುಡಿಯುವ ನೌಕರಿಗೆ ಉತ್ತೇಜನದ ರೂಪದಲ್ಲಿ ಬೋನಸ್ ನೀಡಲಾಗುತ್ತದೆ. ಈ ಮೂಲಕ ನಿಮ್ಮ ಕಠಿಣ ಕೆಲಸವನ್ನು ನಾವು ಕಡೆಗಣಿಸುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದೇವೆ ಎಂದು ಹೇಳಿದ್ದಾರೆ.

ಕೆಲಸದ ಅವಧಿಯನ್ನು ಪರಿಗಣಿಸಿ ಬೋನಸ್ ನಿರ್ಧರಿಸಲಾಗಿದೆ. 40 ವರ್ಷಕ್ಕಿಂತ ಹೆಚ್ಚು ಕಾಲದಿಂದ ಸೇವೆ ಸಲ್ಲಿಸುತ್ತಿರುವವರಿಗೆ $60,000 ಅಂದರೆ  ಸುಮಾರು  42 ಲಕ್ಷ ನೀಡಲಾಗುತ್ತದೆ. ಕನಿಷ್ಠವೆಂದರೆ 14 ಲಕ್ಷ ರೂಪಾಯಿ ಎಂದರು……..