Breaking News

ಟೊಮೆಟೋ ಬೆಲೆ ದಿಢೀರ್‌ ಏರಿಕೆ..!

ಪೂರೈಕೆಯಲ್ಲಿ ಆಗಿರುವ ವ್ಯತ್ಯಾಸವೇ ಕಾರಣ....

SHARE......LIKE......COMMENT......

ಬೆಂಗಳೂರು: 

ಕಳೆದ ಆರು ತಿಂಗಳಿಂದ ಟೊಮೆಟೋ ಬೆಲೆ ಕೆಜಿಗೆ 20 ರೂ. ಕೂಡ ದಾಟಿರಲಿಲ್ಲ. ಇದೇ ಕಾರಣಕ್ಕೆ ರೈತರು ಪ್ರತಿಭಟನೆ ಕೂಡ ನಡೆಸಿದರು. ಆದರೆ, ಕಳೆದ ಮೂರ್‍ನಾಲ್ಕು ದಿನಗಳಿಂದ ಏಕಾಏಕಿ ಪೂರೈಕೆಯಲ್ಲಿ ಖೋತಾ ಆಗಿದೆ.  ನಿತ್ಯ ಬೆಂಗಳೂರಿಗೇ 200 ಲೋಡ್‌ ಬರುತ್ತಿದ್ದ ಟೊಮೆಟೋ ಕಳೆದ ಒಂದು ವಾರದಿಂದ ಅಬ್ಬಬ್ಟಾ ಎಂದರೆ 30ರಿಂದ 40 ಲೋಡ್‌ ಬರುತ್ತಿದೆ. ಇದರ ಪರಿಣಾಮ ಬೇಡಿಕೆ ಹೆಚ್ಚಿದ್ದು, ಸಹಜವಾಗಿ ಬೆಲೆ ಗಗನಕ್ಕೇರಿದೆ.

ರಾಜ್ಯದ ಮಾರುಕಟ್ಟೆಗಳಲ್ಲಿ ಟೊಮೆಟೊಗೆ ಬೇಡಿಕೆ ಬರುತ್ತಿದ್ದಂತೆ ನಾಸಿಕ್‌ ಸೇರಿದಂತೆ ಹೊರ ರಾಜ್ಯಗಳಿಂದ ಇಲ್ಲಿಗೆ ಪೂರೈಕೆ ಆಗುತ್ತಿದೆ. ಪ್ರತಿ ದಿನ ಕಲಾಸಿಪಾಳ್ಯ ಸಗಟು ಮಾರುಕಟ್ಟೆಗೆ ಸರಿಸುಮಾರು 15-20 ಲೋಡ್‌ ಬರುತ್ತಿದೆ. ಹೀಗೆ ಹೊರಗಡೆಯಿಂದ ಬರುವುದರಿಂದ ಬೆಲೆ ಏರಿಕೆಯಾಗಿದ್ದು, ಸಗಟು ಕೆಜಿಗೆ 50ರಿಂದ 60 ರೂ. ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 70 ರೂ. ತಲುಪಿದೆ. ಇನ್ನೂ 10-15 ದಿನಗಳು ಇದೇ ಸ್ಥಿತಿ ಇರಲಿದೆ ಎಂದು ಕಲಾಸಿಪಾಳ್ಯ ಸಗಟು ತರಕಾರಿ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಆರ್‌. ಮಂಜುನಾಥ್‌ ಅಭಿಪ್ರಾಯಪಡುತ್ತಾರೆ……