Breaking News

ಪತಿ ಬಿಟ್ಟು ಕುಟುಂಬದೊಂದಿಗೆ ನಟಿಯ ಪ್ರವಾಸ..!

ರಾಜ್ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ಕಿತ್ತಾಟ..?

SHARE......LIKE......COMMENT......

ನವದೆಹಲಿ:

ರಾಜ್ ಕುಂದ್ರಾಗೆ ಜಾಮೀನು ಸಿಕ್ಕ ಬಳಿಕ ಶಿಲ್ಪಾ ಸ್ವಲ್ಪ ನಿರಾಳರಾದಂತೆ ಕಂಡುಬಂದಿದ್ದಾರೆ. ಆದರೆ ಅವರು ತಮ್ಮ ಪತಿ ಜೊತೆ ವೈಮನಸ್ಸು ಹೊಂದಿದ್ದಾರೆಯೇ..? ಅನ್ನೋ ಪ್ರಶ್ನೆ ಮೂಡಿದೆ.

ರಾಜ್ ಕುಂದ್ರಾ(Raj Kundra) ಬಿಡುಗಡೆ ಬಳಿಕ ಎಲ್ಲಿಯೂ ಕಾಣಸಿಕೊಂಡಿಲ್ಲ. ಆದರೆ ಶಿಲ್ಪಾ ಶೆಟ್ಟಿ ಮಾತ್ರ ಆಗಾಗ ಹೊರಗಡೆ ಕಾಣಿಸಿಕೊಳ್ಳುತ್ತಿದ್ದಾರೆ. ಪತಿ ಜೊತೆ ಕಿತ್ತಾಟ ಶುರುಮಾಡಿಕೊಂಡಿರುವ ಶಿಲ್ಪಾ ಶೆಟ್ಟಿ ಅವರಿಂದ ದೂರವಾಗಲು ಬಯಸುತ್ತಿದ್ದಾರೆಂದು ಅನೇಕ ಗಾಳಿಸುದ್ದಿಗಳು ಹರಿದಾಡಿದ್ದವು. ಇದಕ್ಕೆ ಪುಷ್ಠಿ ನೀಡುವಂತೆ ಶಿಲ್ಪಾ ಶೆಟ್ಟಿ ಈ ವೀಕೆಂಡ್​ನಲ್ಲಿ ತಮ್ಮ ಮಕ್ಕಳಾದ ವಿಯಾನ್ ಹಾಗೂ ಸಮಿಷಾ, ತಾಯಿ ಸುನಂದಾ ಶೆಟ್ಟಿಯವರೊಂದಿಗೆ ಆಲಿಬಾಗ್​ಗೆ ಪ್ರವಾಸ ಕೈಗೊಂಡಿದ್ದರು. ಆದರೆ ಈ ವೇಳೆ ರಾಜ್ ಕುಂದ್ರಾ ಗೈರು ಎದ್ದು ಕಾಣುತ್ತಿತ್ತು.

ಅಶ್ಲೀಲ ಸಿನಿಮಾ ತಯಾರಿಕೆ ಹಾಗೂ ಹಂಚಿಕೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ರಾಜ್ ಕುಂದ್ರಾ ಜುಲೈನಲ್ಲಿ ಜೈಲು ಪಾಲಾಗಿದ್ದರು. ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೂ ಅವರು ಹೊರಗೆಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಇತ್ತೀಚೆಗೆ ಶಿಲ್ಪಾಶೆಟ್ಟಿ(Shilpa Shetty) ಹಂಚಿಕೊಂಡ ಹಬ್ಬಗಳ ಆಚರಣೆಯ ಫೋಟೋಗಳಲ್ಲಿಯೂ ರಾಜ್ ಕುಂದ್ರಾ ನಾಪತ್ತೆಯಾಗಿದ್ದರು. ಹೀಗಾಗಿ ಈ ದಂಪತಿ ಉದ್ದೇಶಪೂರ್ವಕವಾಗಿಯೇ ಈ ರೀತಿ ದೂರವಾಗಲು ಪ್ರಯತ್ನಿಸುತ್ತಿದ್ದಾರೆಂದು ಸೋಷಿಯಲ್ ಮೀಡಿಯಾದಲ್ಲಿ ಗುಲ್ಲು ಶುರುವಾಗಿದೆ…..