ರಾಷ್ಟ್ರೀಯ:
ಅಕ್ಟೋಬರ್ 31ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ವಿಶೇಷವಾಗಿ ಆಚರಿಸಲು ಮುಂದಾಗಿದ್ದಾರೆ. ಅಕ್ಟೋಬರ್ 15ರಿಂದ ತಮಿಳುನಾಡು ಪೊಲೀಸರು ಕನ್ಯಾಕುಮಾರಿಯಿಂದ ಗುಜರಾತಿನ ಕೆವಾಡಿಯಾವರೆಗೆ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದು, ನಿನ್ನೆ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ನಗರದ ಚನ್ನಮ್ಮ ವೃತ್ತಕ್ಕೆ ಆಗಮಿಸಿದ ತಮಿಳುನಾಡು ಪೊಲೀಸರನ್ನು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಕೆ.ರಾಮರಾಜನ್ ಸ್ವಾಗತಿಸಿದರು. ಬಳಿಕ ಪೊಲೀಸರು ಗುಜರಾತ್ಗೆ ಪ್ರಯಾಣ ಮಾಡಿದ್ರು.