ಮಹಾರಾಷ್ಟ್ರ:
ಮಹಾರಾಷ್ಟ್ರದಲ್ಲಿ IT ಅಧಿಕಾರಿಗಳು ಬೃಹತ್ ರೇಡ್ ಮಾಡಿ ಬರೋಬ್ಬರಿ 26 ಕೋಟಿ ನಗದು ಸೇರಿ 90 ಕೋಟಿ ಮೌಲ್ಯದ ಅಕ್ರಮ ಸಂಪತ್ತು ಪತ್ತೆ ಮಾಡಿದ್ದಾರೆ. ನಾಸಿಕ್ನ ಸುರಾನ ಆಭರಣ ಮಳಿಗೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಆಗಿದೆ. ತೆರಿಗೆ ವಂಚನೆ ಪ್ರಕರಣದಲ್ಲಿ ಸುರಾನ ಆಭರಣ ಮಳಿಗೆ, ಮಾಲಿಕರ ಮನೆ ಸೇರಿ ವಿವಿಧೆಡೆ ರೇಡ್ ಮಾಡಿ ಪರಿಶೀಲನೆ ನಡೆಸಿ ಅಪಾರ ಪ್ರಮಾಣದ ದಾಖಲೆ ವಶಕ್ಕೆ ಪಡೆದುಕೊಳ್ಳಲಾಗಿದೆ. 26 ಕೋಟಿ ನಗದು ಸೇರಿ 90 ಕೋಟಿಯ ಸಂಪತ್ತಿನ ದಾಖಲೆ ವಶಕ್ಕೆ ಪಡೆಯಲಾಗಿದೆ.