Breaking News

ಚೀನಾದಲ್ಲಿ ಕಸವನ್ನು ಜಿರಳೆಗಳಿಗೆ ತಿನ್ನಿಸಲಾಗುತ್ತದೆ..!

ಕಸ ನಿರ್ವಹಣಾ ಘಟಕದಲ್ಲಿ ಜಿರಳೆಗಳ ಸಾಕಾಣೆ.....

SHARE......LIKE......COMMENT......

ಬೀಜಿಂಗ್:

ಜಿರಳೆ ಕಂಡರೆ ಮಾರುದೂರ ಓಡುವವರೇ ಜಾಸ್ತಿ…ಆದರೆ ಬೀಜಿಂಗ್‌ನಲ್ಲಿ ದೊಡ್ಡ ಮಟ್ಟದಲ್ಲಿ ಜಿರಳೆ ಸಾಕಿ, ಅದಕ್ಕೆ ಕಸ ಒದಗಿಸಲಾಗುತ್ತದೆ. ಜಿರಳೆಗಳು ಕಸವನ್ನು ತಿಂದು ಖಾಲಿ ಮಾಡುತ್ತವೆ. ಇದರಿಂದ ಕಸವನ್ನು ಸುಡುವುದು, ಹೂಳುವುದು ತಪ್ಪುತ್ತದೆ. ಚೀನಾದ ಶಾಂದಾಂಗ್ ಪ್ರಾಂತ್ಯದ ಜಿನಾನ್‌ನ ಹೊರವಲಯದಲ್ಲಿ ಶಾಂದಾಂಗ್ ಕೊಬಿನ್ ಅಗ್ರಿಕಲ್ಚರಲ್ ಟೆಕ್ನಾಲಜಿಯು ಕಸ ನಿರ್ವಹಣಾ ಘಟಕವೊಂದನ್ನು ನಡೆಸುತ್ತಿದೆ. ಅಲ್ಲಿಗೆ ಬರುವ ಕಸವನ್ನು ಜಿರಳೆಗಳಿಗೆ ತಿನ್ನಿಸಲಾಗುತ್ತದೆ.

ಜಿರಳೆ ಸತ್ತರೆ ಅವುಗಳನ್ನು ಗೊಬ್ಬರವಾಗಿ ಬಳಸಲಾಗುತ್ತದೆ. ಇಲ್ಲವೆ ಸಾಂಪ್ರದಾಯಿಕ ಔಷಧದಲ್ಲಿ ಮತ್ತು ವಿವಿಧ ವೈದ್ಯಕೀಯ ಸಂಶೋಧನೆಯಲ್ಲಿ ಜಿರಳೆ ಉಪಯೋಗಿಸಲಾಗುತ್ತದೆ. ಜಿರಳೆಗೆ ಬೇಡಿಕೆ ಕುದುರಿರುವುದನ್ನು ಕಂಡು ಅಲ್ಲಿನ ಜನರು ಕೂಡ ಉಪಉದ್ಯಮವಾಗಿ ಜಿರಳೆ ಫಾರ್ಮ್ ಆರಂಭಿಸಿದ್ದಾರೆ.

ಲಕ್ಷಾಂತರ ಸಂಖ್ಯೆಯಲ್ಲಿನ ಜಿರಳೆಗಳು ಪ್ರತಿದಿನ 50 ಟನ್ ಅಡುಗೆಕೋಣೆಯ ತ್ಯಾಜ್ಯವನ್ನು ಗುಳುಂ ಮಾಡುತ್ತವೆ. ಇದಕ್ಕೆ ಹೆಚ್ಚಿನ ವೆಚ್ಚವೇನೂ ಬೇಕಾಗಿಲ್ಲ. ಹೀಗಾಗಿ ಸಂಸ್ಥೆಯು ಇಂತಹುದೇ ಮೂರು ಘಟಕಗಳನ್ನು ಮುಂದಿನ ವರ್ಷದೊಳಗಾಗಿ ಆರಂಭಿಸಲು ಉದ್ದೇಶಿಸಿದೆ.