Breaking News

ಮನಿ ಲಾಂಡರಿಂಗ್​ ಪ್ರಕರಣದಲ್ಲಿ ಜಾರ್ಖಂಡ್ ಸಿಎಂ EDಗೆ ಲಾಕ್…!

36 ಲಕ್ಷ ಹಣ, 2 BMW ಕಾರು,ದಾಖಲೆಗಳು ವಶ.....

SHARE......LIKE......COMMENT......

ರಾಜಕೀಯ:
ಮನಿ ಲಾಂಡರಿಂಗ್​ ಪ್ರಕರಣದಲ್ಲಿ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ED ಬಲೆಯೊಳಗೆ ಸಿಲುಕಿ ಒದ್ದಾಡುತ್ತಿದ್ದಾರೆ. ನಿನ್ನೆ ಸೋರೆನ್​ ನಿವಾಸಕ್ಕೆ ಭೇಟಿ ನೀಡಿದ್ದ ED ಅಧಿಕಾರಿಗಳು 36 ಲಕ್ಷ ಹಣ, 2 BMW ಕಾರು, ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ರು. ಭಾನುವಾರ ರಾತ್ರಿ ದಿಢೀರ್​ ನಾಪತ್ತೆ ಆಗಿದ್ದ ಹೇಮಂತ್ ಸೋರೆನ್ ಇಂದು ಮಧ್ಯಾಹ್ನ ರಾಂಚಿಯಲ್ಲಿ ಪ್ರತ್ಯಕ್ಷವಾಗಿ ಸಚಿವರು ಹಾಗೂ ಶಾಸಕರೊಂದಿಗೆ ಸಭೆ ನಡೆಸಿದ್ದಾರೆ. ಮಹತ್ವದ ಸಭೆಯಲ್ಲಿ ಸಿಎಂ ಹೇಮಂತ್​ ಪತ್ನಿ ಕಲ್ಪನಾ ಸೋರೆನ್ ಸಹ ಭಾಗಿಯಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ನಾಳೆ ಮಧ್ಯಾಹ್ನ 1 ಗಂಟೆಗೆ ಸೊರೇನ್​ ED ವಿಚಾರಣೆಗೆ ಹಾಜರಾಗಲಿದ್ದಾರೆ ಎನ್ನಲಾಗಿದೆ