Breaking News

ರಾಷ್ಟ್ರಪಿತ ಮಹಾತ್ಮ ಗಾಂಧಿ 76ನೇ ಪುಣ್ಯಸ್ಮರಣೆ …!

ಗಾಂಧೀಜಿ ಭಾವಚಿತ್ರಕ್ಕೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ...

SHARE......LIKE......COMMENT......

ರಾಜ್ಯ:
ಇಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಪುಣ್ಯಸ್ಮರಣೆ ಮತ್ತು ಹುತಾತ್ಮ ದಿನಾಚರಣೆ ಅಂಗವಾಗಿ ಮಹಾತ್ಮಾ ಗಾಂಧೀಜಿ ಭಾವಚಿತ್ರಕ್ಕೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಸಲ್ಲಿಸಿದ್ರು. ಈ ವೇಳೆ 1 ನಿಮಿಷ ಮೌನಾಚರಣೆ ಮಾಡಿದ್ರು. ಬಳಿಕ ಮಾತನಾಡಿದ ಸಿಎಂ, ಗಾಂಧೀಜಿಯವ್ರು ಶ್ರೀರಾಮಚಂದ್ರನ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದರು, ರಾಮ ಅಂದ್ರೆ ಸತ್ಯ ಪರಿಪಾಲಕ, ಎಲ್ಲಾ ಜಾತಿಯವರನ್ನು ಸಮಾನವಾಗಿ ನೋಡಿಕೊಳ್ಳುತ್ತಿದ್ದರು ಹಾಗಾಗಿ ರಾಮ ರಾಜ್ಯ ಆಗಬೇಕು ಅಂತಾರೆ. ಇತ್ತೀಚಿನ ಘಟನೆ ನೋಡಿದಾಗ ಶಾಂತಿ ಕದಡುವ ಕೆಲಸ ಆಗ್ತಿದೆ. ಗೋಡ್ಸೆ ವಂಶಸ್ಥರು, ಅವರ ಅನುಯಾಯಿಗಳೇ ಶಾಂತಿ ಕದಡುವ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ರು. ಕಾರ್ಯಕ್ರಮದಲ್ಲಿ ಸಚಿವರಾದ ಮುನಿಯಪ್ಪ, ಬೈರತಿ ಸುರೇಶ್, ಮಾಜಿ ಸಚಿವ ಹೆಚ್ ಆಂಜನೇಯ ಸೇರಿ ಹಲವರು ಉಪಸ್ಥಿತರಿದ್ರು.