Breaking News

ರಾಜ್ಯದಲ್ಲಿ ಇಂದು 249 ಮಂದಿಗೆ ಕೊರೋನಾ ಪಾಸಿಟಿವ್ ಕೇಸ್..!

ಬೆಂಗಳೂರಿನಲ್ಲಿ 126 ಮಂದಿಗೆ ಇಂದು ಕೊರೋನಾ ವಕ್ಕರಿಸಿದೆ....

SHARE......LIKE......COMMENT......

ಬೆಂಗಳೂರು:

ರಾಜ್ಯದಲ್ಲಿ ಜೂನ್ 21ರ ಸಂಜೆ 5 ಗಂಟೆಯಿಂದ ಜೂನ್ 22ರ ಸಂಜೆ 5 ಗಂಟೆವರೆಗೆ 249 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ, ಇಂದು ಒಟ್ಟು 5 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9399ಕ್ಕೆ ಏರಿಕೆಯಾಗಿದೆ, ಈವರೆಗೂ ರಾಜ್ಯದಲ್ಲಿ ಒಟ್ಟು ಕೊರೊನಾ ಸಾವಿನ ಸಂಖ್ಯೆ 142ಕ್ಕೆ ಏರಿಕೆಯಾಗಿದೆ….
ಬೆಂಗಳೂರಿನಲ್ಲಿ 126, ಕಲಬುರಗಿಯಲ್ಲಿ 27 ಪ್ರಕರಣ, ವಿಜಯಪುರ 15 ಕೇಸ್, ಉಡುಪಿಯಲ್ಲಿ 14 ಕೇಸ್, ದಕ್ಷಿಣ ಕನ್ನಡದಲ್ಲಿ 12 ಕೇಸ್, ದಾವಣಗೆರೆಯಲ್ಲಿ 9 ಕೇಸ್ ದಾಖಲಾಗಿದೆ. ಉತ್ತರ ಕನ್ನಡ ಹಾಗೂ ಬಾಗಲಕೋಟೆ ತಲಾ 6 ಕೇಸ್, ಬೀದರ್ ಮತ್ತು ಚಿಕ್ಕಮಗಳೂರು ತಲಾ 5 ಪ್ರಕರಣ, ಧಾರವಾಡ ಮತ್ತು ಬೆಂಗಳೂರು ಗ್ರಾಮಾಂತರ ತಲಾ 4 ಕೊರೋನಾ ಕೇಸ್ ವರದಿಯಾಗಿದೆ.