ಬೆಂಗಳೂರು:
ದೇಶಾದ್ಯಂತ ಕಿಲ್ಲರ್ ಕೊರೋನಾ ಅಬ್ಬರ ಮುಂದುವರೆದಿದೆ.ನಿನ್ನೆವರೆಗೂ ರಾಜ್ಯದಲ್ಲಿ ಕೊರೋನಾ ಕಂಟ್ರೋಲ್ ಅಂತ ಭಾವಿಸಿದ್ದವರಿಗೆ ಮಹಾಮಾರಿ ಫುಲ್ ಶಾಕ್ ಕೊಟ್ಟಿದೆ..ನಿನ್ನೆ ಹೊಸದಾಗಿ 337 ಕೇಸ್ ಪತ್ತೆಯಾಗಿದ್ದು ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8,281ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ನಿನ್ನೆ ಮತ್ತೆ 10 ಮಂದಿ ಕೊರೋನಾಗೆ ಮೃತಪಟ್ಟಿದ್ದು ಸಾವಿನ ಸಂಖ್ಯೆ 124ಕ್ಕೆ ಏರಿಕೆಯಾಗಿದೆ. ಇನ್ನೂ ಬೆಂಗಳೂರು ನಗರದಲ್ಲಿ ನಿನ್ನೆ ಕೊರೊನಾ ಸ್ಫೋಟಗೊಂಡಿದ್ದು, ಬರೋಬ್ಬರಿ 138 ಮಂದಿಗೆ ಸೋಂಕು ತಗುಲಿದೆ…ಇದೇ ರೀತಿ ಕೊರೋನಾ ಹಾವಳಿ ಮುಂದುವರಿದರೆ ಕೆಲವೇ ದಿನಗಳಲ್ಲಿ ಬೆಂಗಳೂರು ಕೊರೋನಾ ಹಬ್ ಆಗುವುದು ಗ್ಯಾರೆಂಟಿ….