Breaking News

ಯಾವ ಕೋಣೆ ಯಾವ ದಿಕ್ಕಿನಲ್ಲಿದ್ದರೆ ಮನೆಯ ಸಮೃದ್ಧಿ ಹೆಚ್ಚುತ್ತದೆ..!

ನಿಮ್ಮ ಮನೆಯ ವಾಸ್ತು ಹೇಗಿರಬೇಕು....

SHARE......LIKE......COMMENT......

ಧರ್ಮ-ಜ್ಯೋತಿ:

ಭಾರತೀಯ ಶಾಸ್ತ್ರಗಳಲ್ಲಿ ವಾಸ್ತು ಶಾಸ್ತ್ರ ಪ್ರಮುಖವಾದದ್ದು ಮತ್ತು ಅತಿ ಹೆಚ್ಚು ಜನರು ನಂಬುವ ಅತ್ಯಂತ ಪ್ರಾಚೀನ ಸೂತ್ರ. ವಾಸ್ತು ಸೂತ್ರಗಳು ಜನರಿಗೆ ಹೇರಿಕೆಯಾಗುವ ಬದಲು ಉತ್ತಮ ಜೀವನ ನಡೆಸಲು ಸಹಕಾರಿಯಾಗಿರಬೇಕು.  ವಾಸ್ತು ಬಗ್ಗೆ ಕೆಲವು ಮಿಥ್ಯ ನಂಬಿಕೆಗಳಿವೆ. ಅವುಗಳಲ್ಲಿ ಕೆಲವು ಮಿಥ್ಯ ನಂಬಿಕೆಗಳು ಹಾಗೂ ಸತ್ಯ ಸಂಗತಿಗಳು ಹೀಗಿವೆ.

ಸಾಮಾನ್ಯವಾಗಿ ಯಾವುದೇ ಮನೆಗೆ ಈಶಾನ್ಯ ದಿಕ್ಕಿನಿಂದ ಪ್ರವೇಶ ದ್ವಾರ ಇರುವುದು ಶ್ರೇಷ್ಠ ಎಂಬ ನಂಬಿಕೆ ಇದೆ. ಆದರೆ ಪ್ರತಿ ಮನೆಗೂ ಇದೇ ಸಿದ್ಧ ಸೂತ್ರ ಅನ್ವಯವಾಗಬೇಕೆಂದು ಇಲ್ಲ. ಆ ಪ್ರದೇಶಗಳ ಶಕ್ತಿ ಹಾಗೂ ಆ ಮನೆಯಲ್ಲಿ ವಾಸಿಸುವ ಜನರ ಮೇಲೆ ಅವಲಂಬಿತವಾಗಿರುತ್ತದೆ. ಮತ್ತೊಂದು ನಂಬಿಕೆಯೆಂದರೆ ಮನೆಗಾಗಲೀ, ಕಚೇರಿಗಾಗಲಿ ಆಗ್ನೇಯ ದಿಕ್ಕಿನಲ್ಲಿ ಪ್ರವೇಶ ಇರಬಾರದೆಂಬ ನಂಬಿಕೆ ಇದೆ. ಆಗ್ನೇಯ ದಿಕ್ಕಿನ ಪ್ರವೇಶವನ್ನು ಅಗ್ನಿ ಕುಂಡ ಎಂದು ಹೇಳಲಾಗಿದ್ದು, ಪ್ರವೇಶ ದ್ವಾರ ಇರುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಇದೆ.  ಆದರೆ ಇದೂ ಸಹ ಸಾರ್ವತ್ರಿಕವಾಗಿ ಅನ್ವಯವಾಗುವ ನಿಯಮವಲ್ಲ, ಕೆಲವು ಅದೃಷ್ಟವಂತರಿಗೆ ಮಾತ್ರ ಸರಿ ಹೊಂದುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

ಇನ್ನು ನೈಋತ್ಯ ದಿಕ್ಕಿನಲ್ಲಿ ಗುಂಡಿ ಅಥವಾ ಬಾವಿ ಇರಬಾರದೆಂದು ಹೇಳಲಾಗುತ್ತದೆ. ಯಾವುದೇ ಪ್ರದೇಶದಲ್ಲಿ ನೈಋತ್ಯ ದಿಕ್ಕಿನಲ್ಲಿ ತಗ್ಗು ಅಥವಾ ಬಾವಿ ಇದ್ದರೆ ಆ ಪ್ರದೇಶದಲ್ಲಿರುವ ತರಂಗ ಶಕ್ತಿಯನ್ನು ಸಮತೋಲನ ಮಾಡುವ ಮಾರ್ಗ ಕಂಡುಕೊಳ್ಳಬೇಕು, ಆಗ್ನೇಯಕ್ಕೆ ಅಗ್ನಿ ಆಧಿಪತಿಯಾಗಿರುವುದರಿಂದ, ಆ ದಿಕ್ಕಿನಲ್ಲಿ ಅಡುಗೆ ಮನೆ ನಿರ್ಮಾಣ ಪ್ರಶಸ್ತವಾಗಿದೆ. ಆಗ್ನೇಯ ಮೂಲೆಯಿಂದ ಬೀಸುವ ಗಾಳಿ ಅಡುಗೆ ಮನೆಯಿಂದ ಹೊಗೆ ಸುಲಭವಾಗಿ ಹೊರ ಹೋಗಲು ನೆರವಾಗುತ್ತದೆ. ಆ ಕಾರಣಕ್ಕಾಗಿ ಮನೆ ನಿರ್ಮಿಸುವಾಗ ವಾಸ್ತು ಶಾಸ್ತ್ರದಲ್ಲಿ ಅಡುಗೆ ಮನೆ ಆಗ್ನೇಯ  ದಿಕ್ಕಿನಲ್ಲಿರುವಂತೆ ಸೂಚಿಸುತ್ತಾರೆ.

ಈಶಾನ್ಯ ಮೂಲೆಯಲ್ಲಿ ಶೌಚಾಲಯ ನಿಷಿದ್ಧ ಈಶಾನ್ಯ ದಿಕ್ಕಿನ ಅಧಿಪತಿ ಸದಾಶಿವನಾದ ಈಶ್ವರನಾಗಿದ್ದು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆದ್ದರಿಂದಲೇ ಈಶಾನ್ಯ ಮೂಲೆಯಲ್ಲಿ ಶೌಚಾಲಯ ನಿರ್ಮಿಸುವುದು ನಿಷಿದ್ಧ ಎಂದು ಹೇಳಲಾಗಿದೆ. ಈಶಾನ್ಯ ಮಾತ್ರವಲ್ಲದೇ ಪೂರ್ವ ದಿಕ್ಕಿನಲ್ಲಿ ಸಹ ಶೌಚಾಲಯ ನಿರ್ಮಾಣ ಸೂಕ್ತವಲ್ಲ, ಪೂರ್ವ ದಿಕ್ಕಿನಲ್ಲಿ ಶೌಚಾಲಯ ನಿರ್ಮಿಸಿದರೆ ಅನಾರೋಗ್ಯ ಎದುರಾಗುವ ಸಂಭವ ಹೆಚ್ಚು ಎಂಬುದು ತಜ್ಞರ ಅಭಿಪ್ರಾಯ. ಅದಕ್ಕಾಗಿಯೇ ದೇವರ ಮನೆಗೆ ಈಶಾನ್ಯ, ನೈರುತ್ಯ, ವಾಯುವ್ಯದಲ್ಲಿ ಬಚ್ಚಲು ಮನೆ, ಶೌಚಾಲಯ ನಿರ್ಮಾಣ, ಉತ್ತರ ಈಶಾನ್ಯದಲ್ಲಿ ನೀರಿನ ಟ್ಯಾಂಕ್, ಬಾವಿ, ನಿರ್ಮಿಸುವುದು ಶುಭ ಹಾಗೂ ಸೂಕ್ತ ಎಂದು ಹೇಳಲಾಗುತ್ತದೆ……