Breaking News

ಅಮೆರಿಕಾದಲ್ಲಿ ಮಹಾಮಾರಿ ಕೊರೊನಾ ವೈರಸ್ ನ ಆರ್ಭಟ..!

ಒಂದೇ ದಿನಕ್ಕೆ 66,528 ಕೇಸ್​​ ಪತ್ತೆ, 774 ಮಂದಿ ಸಾವು....

SHARE......LIKE......COMMENT......

ಅಮೆರಿಕಾ, ವಾಷಿಂಗ್ಟನ್:

ವಿಶ್ವದ ದೊಡ್ಡಣ್ಣ ಅಮೆರಿಕಾವನ್ನು ಮಹಾಮಾರಿ ಕೋವಿಡ್​ 19 ವೈರಸ್ ಸೋಂಕು ಬಹಳ ಕಾಡಿಸುತ್ತಿದ್ದು, ಕಳೆದ 24 ಗಂಟೆಗಳಲ್ಲಿ 66,528 ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇನ್ನು ಕೇವಲ ಒಂದೇ ದಿನದಲ್ಲಿ ಕೊರೊನಾ ವೈರಸ್ 774 ಮಂದಿಯನ್ನು ಬಲಿ ಪಡೆದುಕೊಂಡಿದ್ದು, ಈ ಬೆಳವಣಿಗೆಯೊಂದಿಗೆ ಅಲ್ಲಿನ ಸಾವಿನ ಸಂಖ್ಯೆ ಕೂಡ 133,969ಕ್ಕೆ ಏರಿಕೆ ಆಗಿದೆ. ಒಂದೇ ದಿನ 66,528 ಮಂದಿ ಸೋಂಕು ಪತ್ತೆಯಾಗುವುದರೊಂದಿಗೆ ರಾಷ್ಟ್ರದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 3.18 ಮಿಲಿಯನ್’ಗೆ ತಲುಪಿದೆ ಎಂದು ವರದಿಗಳು ತಿಳಿಸಿವೆ……