Breaking News

ದೆಹಲಿಯಲ್ಲಿ ಹೆಚ್ಚಿಸಿದ ಕರೋನಾ ಮಹಾಮಾರಿ..!

ಕರೋನಾವೈರಸ್ ನಿಯಂತ್ರಣಕ್ಕೆ ಬರುತ್ತಿಲ್ಲ....

SHARE......LIKE......COMMENT......

ನವದೆಹಲಿ:

ದೇಶದ ರಾಜಧಾನಿಯಾದ ದೆಹಲಿಯಲ್ಲಿ ಕರೋನಾವೈರಸ್ ನಿಯಂತ್ರಣಕ್ಕೆ ಬರುತ್ತಿಲ್ಲ. ದೆಹಲಿಯಲ್ಲಿ ಗುರುವಾರ 1,359 ಹೊಸ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದು ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 25 ಸಾವಿರ ದಾಟಿದೆ. ಜೂನ್ 3 ರಂದು ದೆಹಲಿಯಲ್ಲಿ ಇದುವರೆಗೆ ಅತಿ ಹೆಚ್ಚು 1,513 ಸೋಂಕು ಪ್ರಕರಣಗಳು ವರದಿಯಾಗಿವೆ.ಇದರ ಪ್ರಕಾರ ಜೂನ್ 3 ರಂದು 44 ಸಾವುಗಳು ದಾಖಲಾಗಿದ್ದರೆ, ಜೂನ್ 2 ರಂದು 17 ರೋಗಿಗಳು ಸಾವನ್ನಪ್ಪಿದ್ದಾರೆ. ಬುಧವಾರ ದೆಹಲಿಯಲ್ಲಿ ಕೋವಿಡ್ -19 ಪ್ರಕರಣಗಳು 23,645 ಆಗಿದ್ದರೆ, ಸಾವಿನ ಸಂಖ್ಯೆ 606 ಆಗಿದೆ. ಕರೋನಾ ಪ್ರಕರಣಗಳು ಇನ್ನೂ ಹೆಚ್ಚಾಗಲಿದೆ ಎಂಬ ವರದಿಗಳು ದೆಹಲಿ ಸರ್ಕಾರದ ಕಳವಳವನ್ನು ಹೆಚ್ಚಿಸಿವೆ. ಆದುದರಿಂದ ಹೆಚ್ಚುವರಿಯಾಗಿ ಹಾಸಿಗೆಗಳನ್ನು ಸಿದ್ದಮಾಡಿ ಇಟ್ಟುಕೊಂಡಿರಿ. ಜೊತೆಗೆ COVID 19 ವೈರಸ್ ತಗುಲಿ ಸಾವನ್ನಪ್ಪುವವರ ಸಂಖ್ಯೆ ಕೂಡ ಹೆಚ್ಚಾಗಲಿದೆ. ಕೊರೊನಾಕ್ಕೆ ಬಲಿಯಾದವರ ಶವಸಂಸ್ಕಾರಕ್ಕಾಗಿ ಜಾಗಗಳನ್ನು ಗುರುತಿಸಿ’ ಎಂದು ಜಿಲ್ಲಾಡಳಿಗಳಿಗೆ ಪತ್ರ ಬರೆದಿತ್ತು……