Breaking News

ಕೊರೋನಾ, ನಿಸರ್ಗ ಸೈಕ್ಲೋನ್ ಹೊತ್ತಲ್ಲಿ ಅರೆ ನೆರಳಿನ ಚಂದ್ರ ಗ್ರಹಣ ಕೊಡುತ್ತಾ ಶಾಕ್…!

ರಾತ್ರಿ 11.16ರಿಂದ ಮುಂಜಾನೆ 02.32ರವರೆಗೆ ಚಂದ್ರಗ್ರಹಣ....

SHARE......LIKE......COMMENT......

ಬೆಂಗಳೂರು:

ಕೊರೋನಾ ಸಂಕಷ್ಟ ನಿಸರ್ಗ ಸೈಕ್ಲೋನ್ ಹೊತ್ತಲ್ಲೇ ಇಂದು ಚಂದ್ರಗ್ರಹಣ ಸಂಭವಿಸಲಿದೆ. ಇಂದು ರಾತ್ರಿ 11.16ಕ್ಕೆ ಅರೆ ನೆರಳಿನ ಚಂದ್ರಗ್ರಹಣ ಸಂಭವಿಸಲಿದೆ. ಈ ವಿಭಿನ್ನ ಚಂದ್ರ ಗ್ರಹಣ ಇಂದು ಮತ್ತು ನಾಳೆ 2 ದಿನಗಳ ನಡುವೆ ಗೋಚರಿಸಲಿದೆ. ಜೂನ್ 6 ನಸುಕಿನ ಜಾವ 2.34ಕ್ಕೆ ಚಂದ್ರಗ್ರಹಣ ಮುಕ್ತಾಯಗೊಳ್ಳಲಿದೆ. ಇನ್ನು ಭಾರತ, ಏಷ್ಯಾದ ಕೆಲವು ಭಾಗ, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕ, ಯುರೋಪ್, ಆಫ್ರಿಕಾದಲ್ಲೂ ಚಂದ್ರಗ್ರಹಣ ಗೋಚರವಾಗಲಿದೆ. ಇನ್ನು 30 ದಿನಗಳ ಅಂತರದಲ್ಲೇ 3 ಗ್ರಹಣಗಳು ಸಂಭವಿಸಲಿವೆ. ಜೂನ್ 21ರಂದು ಭಾರತ, ಯುರೋಪ್, ಏಷ್ಯಾದಲ್ಲಿ ಸೂರ್ಯ ಗ್ರಹಣ ಸಂಭವಿಸಲಿದೆ. ಜುಲೈ 5ರಂದು ಮತ್ತೊಮ್ಮೆ ಚಂದ್ರಗ್ರಹಣ ಸಂಭವಿಸಲಿದೆ……