Breaking News

ಶನಿವಾರ-ಭಾನುವಾರ ನಮ್ಮ ಮೆಟ್ರೋ ಸಂಚಾರ ಸ್ಥಗಿತ​..!

ಮೆಟ್ರೋ ರೈಲಿನ ಸಂಚಾರದಲ್ಲಿ ವ್ಯತ್ಯಯ....

SHARE......LIKE......COMMENT......

ಬೆಂಗಳೂರು:

ಬೆಂಗಳೂರು ಮೆಟ್ರೋ ವಿಸ್ತರಣೆಯ ಹಿನ್ನೆಲೆಯಲ್ಲಿ ಮೆಟ್ರೋ ರೈಲಿನ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿ ನಡೆಯುತ್ತಿರುವುದರಿಂದ ನಾಳೆ, ನಾಡಿದ್ದು ವಿಜಯನಗರ-ಮೈಸೂರು ರಸ್ತೆಗಳ ನಡುವೆ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಗಲಿದ್ದು ಮೈಸೂರು ರಸ್ತೆ ಮತ್ತು ವಿಜಯನಗರ ನಡುವೆ ಮೆಟ್ರೋ ಸಂಚಾರ ಬಂದ್​ ಆಗಲಿದೆ. ಡಿಸೆಂಬರ್ 14ರಿಂದ ಮೆಟ್ರೋ ಸಂಚಾರ ಎಂದಿನಂತೆ ಆರಂಭಗೊಳ್ಳಲಿದೆ. ಇನ್ನೂ ಹಸಿರು ಮಾರ್ಗದ ರೈಲು ಸೇವೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲದೇ ಎಂದಿನಂತೆ ರೈಲುಗಳು ಕಾರ್ಯನಿರ್ವಹಿಸಲಿವೆ. ಮೈಸೂರು ರಸ್ತೆಯಿಂದ-ಕೆಂಗೇರಿ ತನಕ ನಮ್ಮ ಮೆಟ್ರೋ ಮಾರ್ಗವನ್ನು ವಿಸ್ತರಣೆ ಮಾಡಲಾಗುತ್ತಿದ್ದು, ವಿದ್ಯುತ್ ಕೇಬಲ್ ಅಳವಡಿಕೆ ಕೆಲಸವನ್ನು ಡಿಸೆಂಬರ್ 12 ಮತ್ತು 13ರಂದು ಕೈಗೊಳ್ಳಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕೃತ ಪ್ರಕಟಣೆ ಹೊರಡಿಸಿದೆ……