ನವದೆಹಲಿ:
ಮಹಾಮಾರಿ ಕೊರೋನಾ ಸೋಂಕು ದೇಶದಲ್ಲಿ ಹೆಚ್ಚಾಗುತ್ತಿದ್ದರೂ ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಕಳೆದ 70 ದಿನಗಳ ನಂತರ ಜೂನ್ 8ರಿಂದ ಧಾರ್ಮಿಕ ಸ್ಥಳಗಳು, ಮಾಲ್, ರೆಸ್ಟೋರೆಂಟ್ ಗಳು ಆರಂಭಗೊಳ್ಳುತ್ತಿದ್ದು ಇದಕ್ಕಾಗಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಹೊಸ ಮಾರ್ಗಸೂಚಿ ಪ್ರಕಾರ:
1 ಪ್ರಾರ್ಥನಾ ಮಂದಿರಗಳ ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ವಿತರಕ ಮತ್ತು ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ.
2 ಭಕ್ತರು ಪ್ರಾರ್ಥನಾ ಮಂದಿರಗಳಲ್ಲಿ ಮೂರ್ತಿಗಳನ್ನು ಮುಟ್ಟುವಂತಿಲ್ಲ.
3 ದೊಡ್ಡ ಕಾರ್ಯಕ್ರಮ, ಸಭೆ-ಸಮಾರಂಭಗಳನ್ನು ನಿಷೇಧಿಸಲಾಗಿದೆ. ಗಾಯಕ ಅಥವಾ ಹಾಡುವ ಗುಂಪುಗಳಿಗೆ ಅವಕಾಶವಿಲ್ಲ.
4 ಮಾಸ್ಕ್ ಧರಿಸಿದ್ದರೆ ಮಾತ್ರ ಪ್ರವೇಶಕ್ಕೆ ಅನುಮತಿ. ರೋಗ ಲಕ್ಷಣ ರಹಿತ ಭಕ್ತರಿಗೆ ಮಾತ್ರ ಪ್ರಾರ್ಥನಾ ಮಂದಿರಕ್ಕೆ ಪ್ರವೇಶ.
5 ಭಕ್ತರು ತಮ್ಮದೇ ಪ್ರಾರ್ಥನಾ ಚಾಪೆಗಳನ್ನು ತರಬೇಕು. ಹೋಗುವಾಗ ತೆಗೆದುಕೊಂಡು ಹೋಗಬೇಕು.
6 ಪರಸ್ಪರ ಹಸ್ತಲಾಘವ, ಶುಭಾಶಯ ಕೋರುವಾಗ ದೈಹಿಕ ಸಂಪರ್ಕ ಬೇಡ.
7 ತೀರ್ಥ ಪ್ರಸಾದಗಳಿಗೆ ನಿರ್ಬಂಧ.
ಮಾಲ್, ರೆಸ್ಟೋರೆಂಟ್ ಗಳಿಗೆ ನಿಯಮಗಳು:
1 ಮಾಲ್ ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ವಿತರಕ ಮತ್ತು ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ.
2 ಕೊರೋನಾ ನಿಯಂತ್ರಣದ ಪೋಸ್ಟರ್ ಹಾಗೂ ವಿಡಿಯೋಗಳನ್ನು ಪ್ರದರ್ಶಿಸಬೇಕು.
3 ಮಾಸ್ಕ್ ಧರಿಸಿದ್ದರೆ ಮಾತ್ರ ಪ್ರವೇಶಕ್ಕೆ ಅನುಮತಿ. ರೋಗ ಲಕ್ಷಣ ರಹಿತ ಗ್ರಾಹಕರಿಗೆ ಮಾತ್ರ ಮಾಲ್, ರೆಸ್ಟೋರೆಂಟ್ ಪ್ರವೇಶ……