ಸ್ಯಾಂಡಲ್‌ವುಡ್:
ಲಾಕ್ಡೌನ್ ಘೋಷಣೆಯಾದ ದಿನದಿಂದ ಸೆಲೆಬ್ರಿಟಿಗಳು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಕೆಲವರು 3 ತಿಂಗಳಿನಿಂದ ಹೊರಗೆ ಎಲ್ಲೂ ಕಾಣಿಸಿಕೊಂಡಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲಿದ್ದಾರೆ(?) ಏನ್ ಮಾಡುತ್ತಿದ್ದಾರೆ. ಅನ್ನೋ ಕುತೂಹಲ ಅಭಿಮಾನಿಗಳಲ್ಲಿತ್ತು. ಇನ್ನು ದರ್ಶನ್ ಬಿಂದಾಸ್ ಸ್ಟೆಪ್ಸ್ ಹಾಕಿರೋ ಹಳೇ ವೀಡಿಯೋ ಈಗ ವೈರಲ್ಲಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲಿದ್ದಾರೆ(?) ಏನ್ ಮಾಡುತ್ತಿದ್ದಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಶೂಟಿಂಗ್ ಇಲ್ಲ, ಎಲ್ಲೂ ಹೋಗಿಲ್ಲ. ಆದರೆ, ಮೈಸೂರಿನ ಫಾರ್ಮ್ಹೌಸ್ನಲ್ಲಿದ್ದಾರಾ(?) ಆರ್ಆರ್ ನಗರದ ನಿವಾಸದಲ್ಲಿದ್ದಾರಾ(?) ಅನ್ನೋದು ಗೊತ್ತಿರಲಿಲ್ಲ. ದರ್ಶನ್ ತಮ್ಮ ಸ್ನೇಹಿತರ ಜೊತೆ ಫಾರ್ಮ್ಹೌಸ್ನಲ್ಲಿರುವ ಒಂದಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ.
ಲಾಕ್ಡೌನ್ ಘೋಷಣೆಯಾದ್ಮೇಲೆ ದರ್ಶನ್ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಕೊರೊನಾ ಮತ್ತು ಲಾಕ್ಡೌನ್ ಬಗ್ಗೆ ಜಾಗೃತಿ ಮೂಡಿಸಲು ಟ್ವಿಟ್ಟರ್ನಲ್ಲಿ ಒಂದಷ್ಟು ಪೋಸ್ಟ್ ಮಾಡಿದರು. ಅವರ ಅಭಿಮಾನಿ ಪ್ರತಿದಿನ ಹಸಿದವರಿಗೆ ಅನ್ನ ನೀಡುವ ಮಹತ್ಕಾರ್ಯ ಮಾಡ್ತಾ ಬರ್ತಿದ್ದಾರೆ. ದರ್ಶನ್ ತಮ್ಮ ಫಾರ್ಮ್ ಹೌಸ್ನಲ್ಲಿದ್ದಾರೆ ಅಂತ ಹೇಳಿ ಇದೀಗ ಅಭಿಮಾನಿಗಳು ಒಂದಷ್ಟು ಫೋಟೋಗಳನ್ನ ಶೇರ್ ಮಾಡುತ್ತಿದ್ದಾರೆ……