Breaking News

ಶಿವಣ್ಣ, ಡಾಲಿ ಕಾಂಬಿನೇಷನ್​ಗೆ ಕಿಕ್​ ಸ್ಟಾರ್ಟ್ ಕೊಟ್ಟ ’ತಮಿಳು ಸ್ಟಾರ್​ ಸೂರ್ಯ’..!

ಕಾಲಿವುಡ್​ಗೆ ಎಂಟ್ರಿ ಕೊಟ್ರಾ ಹ್ಯಾಟ್ರಿಕ್​ ಹೀರೋ..​..

SHARE......LIKE......COMMENT......

ಸಿನಿಮಾ:

ಸೆಂಚುರಿಸ್ಟಾರ್​ ಶಿವಣ್ಣ ಮತ್ತು ಡಾಲಿ ಧನಂಜಯ್​ ಕಾಂಬಿನೇಷನ್ ಟಗರು ಸಿನಿಮಾದಲ್ಲಿ ಸಖತ್​ ಸದ್ದು ಮಾಡಿತ್ತು ಈಗ​ ಈ ಜೊಡಿ ಮತ್ತೆ ಹೊಂದಾಗಲಿದ್ದಾರೆ. ಈ ಜೋಡಿಗೆ ಕನ್ನಡದ ಬಹುಭಾಷಾ ಚಿತ್ರ ’ಅಟ್ಟಹಾಸ’ ಸಿನಿಮಾದಲ್ಲಿ ಛಾಯಾಗ್ರಾಹಕನಾಗಿ ಕನ್ನಡಿಗರಿಗೆ ಪರಿಚಯವಾಗಿದ್ದ ವಿಜಯ್ ಮಿಲ್ಟನ್, ಈಗ ಶಿವಣ್ಣನ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಸಿದ್ಧರಾಗುತ್ತಿದ್ದಾರೆ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ಧರಿಸುತ್ತಿರುವ ವಿಜಯ್ ಮಿಲ್ಟನ್. ಸೆಂಚುರಿ ಸ್ಟಾರ್ ಶಿವಣ್ಣನ ಜೊತೆ ಕೆಲ್ಸ ಮಾಡಲು ಸಖತ್​ ಥ್ರಿಲ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ತಮಿಳಿನ ಸೂಪರ್ ಸ್ಟಾರ್ ಸೂರ್ಯ ಅವರು ಕೂಡಾ ಶಿವಣ್ಣನಿಗೆ ವಿಶ್ ಮಾಡಿ ಹೊಸ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಶಿವರಾಜ್ ಕುಮಾರ್ ಹಾಗೂ ಧನಂಜಯ್ ಅಭಿನಯದ ಈ ಚಿತ್ರಕ್ಕೆ ವಿಜಯ್ ಮಿಲ್ಟನ್ ನಿರ್ದೇಶಕರಾಗಿದ್ದಾರೆ ಎಲ್ಲರಿಗೂ ಶುಭವಾಗಲಿ ಎಂದು ಸೂಪರ್ ಸ್ಟಾರ್ ಸೂರ್ಯ ಶುಭಹಾರೈಸಿದ್ದಾರೆ …..