ಬೆಂಗಳೂರು:
ಕಿಚ್ಚ ಸುದೀಪ್ ಖಡಕ್ ಲುಕ್.. ಖದರ್ ಡೈಲಾಗ್ನಿಂದಲೇ ಸಾಕಷ್ಟು ಸಿನಿಮಾಗಳಲ್ಲಿ ನಟಸಿ, ಬಹುಭಾಷೆಗಳಲ್ಲಿಯೂ ಗುರತಿಸಿಕೊಂಡ ಸ್ಟೈಲಿಶ್ ನಟ. ಇಷ್ಟೇ ಅಲ್ಲ ಗುರು ಸುದೀಪ್ ನಟನೆಯ ಜೊತೆಗೆ ಕೆಲ ಸಿನಿಮಾಗಳಿಗೆ ಡೈರೆಕ್ಟರ್ ಕ್ಯಾಪ್ ಸಹ ಧರಿಸಿದ್ದಾರೆ. ಆದ್ರೆ ಇತ್ತಿಚೆಗೆ ಕನ್ನಡ ಸೇರಿದಂತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಾರಣ, ನಿರ್ದೇಶನದ ಕಡೆ ಮುಖ ಮಾಡಿರಲಿಲ್ಲ. ಆದ್ರೆ ಈಗ ಅಭಿನಯ ಚಕ್ರವರ್ತಿ ಸುದೀಪ್, ಮತ್ತೆ ಆ್ಯಕ್ಷನ್ ಕಟ್ ಹೇಳೋಕ್ಕೆ ರೆಡಿಯಾಗಿದ್ದಾರಂತೆ.
ಹೌದು ಕಿಚ್ಚ ಸುದೀಪ್ ಸದ್ಯ ‘ಫ್ಯಾಂಟಮ್’ ಕ್ಲೈಮ್ಯಾಕ್ಸ್ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಇದ್ರ ನಂತ್ರ ನಟನೆ ಬಿಟ್ಟು ಡೈರೆಕ್ಷನ್ ಕ್ಯಾಪ್ ಧರಿಸಿ, ಮತ್ತೆ ನಿರ್ದೇಶಕರಾಗಲಿದ್ದಾರಂತೆ. ಲಾಕ್ಡೌನ್ ಹಾಗೂ ‘ಫ್ಯಾಂಟಮ್’ ಚಿತ್ರೀಕರಣದ ನಡುವೆ ಸ್ವಲ್ಪ ಬಿಡಿವು ಮಾಡಿಕೊಂಡು ಸುದೀಪ್ ಕಥೆ ರೆಡಿ ಮಾಡಿದ್ದಾರಂತೆ.
ಅಂದ್ಹಾಗೆ ಸುದೀಪ್ ನಿರ್ದೇಶನ ಮಾಡ್ತಿರೋದೇನು ಹೊಸದೇನಲ್ಲ. ಈ ಹಿಂದೆ 2006ರಲ್ಲಿ ‘ಮೈ ಆಟೋಗ್ರಾಫ್’ ಸಿನಿಮಾದಿಂದ ಹಿಡಿದು 2014ರ ‘ಮಾಣಿಕ್ಯ’ ಸಿನಿಮಾದವರೆಗೂ ಕಿಚ್ಚನ ಕೈಚಳಕ ಜೋರಾಗಿತ್ತು. ಈಗ ಮತ್ತೆ ನಿರ್ದೇಶನದತ್ತ ಮುಖ ಮಾಡ್ತಿರೋದು ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಕುತೂಹಲ ಕ್ರಿಯೇಟ್ ಮಾಡಿದೆ. ಇನ್ನು ಈ ವಿಷಯ ಕೇಳಿದ ಅಭಿಮಾನಿಗಳ ಮನದಲ್ಲಿ ಕಿಚ್ಚ ನಿರ್ದೇಶನ ಮಾಡ್ತಿರೋ ಹೊಸ ಸಿನಿಮಾದ ಕಥೆ ಹೇಗಿರುತ್ತೆ..? ಯಾವ ಸ್ಟಾರ್ ನಟಿಗೆ ಸುದೀಪ್ ಆ್ಯಕ್ಷನ್ ಕಟ್ ಹೇಳಬಹುದು..? ಹೀಗೆ ಹತ್ತು ಹಲವು ಪ್ರಶ್ನೆಗಳು ಮೂಡಿದೆ. ಇದಕ್ಕೆ ಉತ್ತರ ಸಿಗಬೇಕು ಅಂದ್ರೆ ಸುದೀಪ್ ಅಫಿಷಿಯಲ್ ಆಗಿ ಅನೌನ್ಸ್ ಮಾಡೋವರೆಗೂ ಕಾದು ನೋಡಲೇಬೇಕು……